ಪರಿಷತ್ ಚುನಾವಣೆ; ದೇವೇಗೌಡರ ಇನ್ನೊಂದು ಕುಡಿ ರಾಜಕೀಯಕ್ಕೆ ಎಂಟ್ರಿ..?


ಬೆಂಗಳೂರು: ರಾಜಕೀಯ ದೊಡ್ಮನೆ ಗೌಡರ ಕುಟುಂಬದಿಂದ ಮತ್ತೊಂದು ಕುಡಿ ರಂಗ ಪ್ರವೇಶಕ್ಕೆ ಮುಹೂರ್ತ ಹತ್ತಿರವಾದಂತಿದೆ. ಹಾಸನದಲ್ಲಿ ತಮ್ಮ ಕ್ಯಾನ್​​ವಾಸ್​​ ವಿಸ್ತರಿಸಲು ಮುಂದಾಗಿರುವ ದಳಪತಿ, ಪರಿಷತ್​​ನಲ್ಲಿ ಹೊಸ ತಂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗೌಡರ ಮತ್ತೊಬ್ಬ ಮೊಮ್ಮಗ, ರೇವಣ್ಣರ ಜೇಷ್ಠ ಪುತ್ರ ರಾಜಕೀಯಕ್ಕೆ ಎಂಟ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.

ರಾಜಕೀಯಕ್ಕೆ ದೊಡ್ಮನೆ ಗೌಡರ ಕುಟುಂಬದಿಂದ ಮತ್ತೊಂದು ಕುಡಿ ರಂಗ ಪ್ರವೇಶಕ್ಕೆ ಮುಹೂರ್ತ ಹತ್ತಿರವಾದಂತಿದೆ. ಪರಿಷತ್​​ನಲ್ಲಿ ಹೊಸ ತಂತ್ರ ಪ್ರಯೋಗಕ್ಕೆ ಗೌಡರು ಮುಂದಾಗಿದ್ದಾರೆ. ಗೌಡರ ಮತ್ತೊಬ್ಬ ಮೊಮ್ಮಗ, ರೇವಣ್ಣರ ಜೇಷ್ಠ ಪುತ್ರ ಸೂರಜ್ ರಾಜಕೀಯಕ್ಕೆ ಎಂಟ್ರಿ ಆಗೋದು ಫಿಕ್ಸ್​  ಎನ್ನಲಾಗುತ್ತಿದೆ.

ಗೌಡರ ಕುಟುಂಬದ ಪ್ಲಾನ್​​
ಹಾಸನದ ಸ್ಥಳೀಯ ಸಂಸ್ಥೆಯಿಂದ ಪರಿಷತ್ ಚುನಾವಣೆ ವಿಚಾರ
ಇಂದು ಹಾಸನ ಅಭ್ಯರ್ಥಿ ಆಯ್ಕೆ ಸಂಬಂಧ ಜಿಲ್ಲೆಯ ಶಾಸಕರ ಸಭೆ

ಹಾಸನದ ಸ್ಥಳೀಯ ಸಂಸ್ಥೆಯಿಂದ ಪರಿಷತ್ ಚುನಾವಣೆ ವಿಚಾರದಲ್ಲಿ ಇಂದು ಹಾಸನ ಅಭ್ಯರ್ಥಿ ಆಯ್ಕೆ ಸಂಬಂಧ ದೇವೇಗೌಡರು ಜಿಲ್ಲೆಯ ಶಾಸಕರ ಸಭೆ ಕರೆದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್​​ಗೆ ಸಮರ್ಥ ಅಭ್ಯರ್ಥಿಯ ಕೊರತೆ ಇರೋದ್ರಿಂದ ಕುಟುಂಬದವರನ್ನೇ ಅಖಾಡಕ್ಕೆ ಇಳಿಸುವ ಬಗ್ಗೆ ದಳಪತಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಕುಟುಂಬದಿಂದ ಮತ್ತೊಬ್ಬರ ಎಂಟ್ರಿಯಾದರೆ ಟೀಕೆ ವ್ಯಕ್ತವಾಗಬಹುದೆಂಬ ಆತಂಕ ಕೂಡ ಇದೆ.

ಸೂರಜ್ ಎಂಟ್ರಿ ಕುಟುಂಬ ರಾಜಕಾರಣ ಎಂಬ ಕಳಂಕ ಬರುವ ಆತಂಕದ ನಡುವೆ ದೇವೇಗೌಡರು ಪ್ಲ್ಯಾನ್ ಬಿ ಕೂಡ ಮಾಡಿಕೊಂಡಿದ್ದಾರಂತೆ. ಹೀಗಾಗಿ ಸೂರಜ್ ಜೊತೆಗೆ ಭವಾನಿ ರೇವಣ್ಣ ಹೆಸರೂ ಕೇಳಿಬರುತ್ತಿದೆ.

ಇದನ್ನೂ ಓದಿ:ಅಡ್ವಾಣಿಗೆ ವಿಶ್ ಮಾಡಿದ್ಕೆ ಟ್ರೋಲ್.. ‘ಆಘಾತಗೊಂಡಿದ್ದೇನೆ’ ಎಂದ ಶಶಿ ತರೂರ್

ಯಾರಿಗೆ ದಳದ ಟಿಕೆಟ್​?

ರೇವಣ್ಣ ಪತ್ನಿ ಭವಾನಿ ರೇವಣ್ಣ ಇಲ್ಲವೇ ಪುತ್ರ ಸೂರಜ್​ಗೆ ಟಿಕೆಟ್​​​ ನೀಡುವ ಸಾಧ್ಯತೆಗಳಿವೆ. ಇವರಿಬ್ಬರಲ್ಲಿ ಒಬ್ಬರ ಎಂಟ್ರಿ ಆಗಬಹುದು ಎಂಬ ಬಗ್ಗೆ ಗುಸುಗುಸು ಚರ್ಚೆ ನಡೀತಿದೆ. ಮಹಿಳೆ ಎಂಬ ಕಾರಣಕ್ಕೆ ಭವಾನಿ ರೇವಣ್ಣರೇ ಸೂಕ್ತವೆಂಬ ಮಾತು ಕೇಳಿಬರುತ್ತಿದೆ. ಇನ್ನು ಜಿಲ್ಲಾ ರಾಜಕಾರಣದಲ್ಲೂ ಛಾಪು ಮೂಡಿಸಿರುವ ಭವಾನಿ ರೇವಣ್ಣ ನಡುವೆಯೇ ಭವಾನಿ ಪುತ್ರ ಸೂರಜ್ ಸ್ಪರ್ಧೆ ಕುರಿತೂ ಚರ್ಚೆ ನಡೀತಿದೆ. ಈ ವಿಚಾರ ಸುದ್ದಿಯಲ್ಲಿರುವ ನಡುವೆ ಈಗಾಗ್ಲೇ ಸೂರಜ್ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ರಾಜಕೀಯದ ಪಾಠಶಾಲೆ ಆಗಿರುವ ಜೆಡಿಎಸ್​​​ನಲ್ಲಿ ಗೌಡರು ಮುಖ್ಯೋಪಾದ್ಯಾಯರಿದ್ದಂತೆ. ಸದ್ಯ ಈ ಪಾಠಶಾಲೆಯ ರಾಜಕೀಯ ವಂಶವೃಕ್ಷದ ವಿಚಾರವನ್ನ ನೋಡೋದಾದ್ರೆ.

ಗೌಡರ ‘ರಾಜಕೀಯ ವಂಶವೃಕ್ಷ’!
ಈಗಾಗಲೇ ಹೆಚ್.ಡಿ ದೇವೇಗೌಡ ರಾಜ್ಯಸಭಾ ಸದಸ್ಯರಾಗಿದ್ದಾರೆ. ದೇವೇಗೌಡರ ಪುತ್ರ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಶಾಸಕರು. ಸೊಸೆ ಅನಿತಾ ಕುಮಾರಸ್ವಾಮಿ ಶಾಸಕಿ, ಮೊಮ್ಮಗ ಪ್ರಜ್ವಲ್ ಸಂಸದರಾಗಿದ್ದಾರೆ. ಇತ್ತ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆ ಆಗಿದ್ದಾರೆ. ಈಗ ಮತ್ತೊಬ್ಬರ ಎಂಟ್ರಿಯಿಂದ ಕುಟುಂಬದ ಏಳು ಮಂದಿ ರಾಜಕೀಯಕ್ಕೆ ಬಂದಂತಾಗುತ್ತೆ.

ಅದೇನೇ ಇರಲಿ ಒಟ್ನಲ್ಲಿ ಪರಿಷತ್ ಚುನಾವಣೆಗೆ ಹಾಸನದ ಅಭ್ಯರ್ಥಿ ವಿಚಾರದಲ್ಲಿ ಸೂರಜ್ ಎಂಟ್ರಿ ಅನ್ನೋ ಮಾತುಗಳು ಸಾಕಷ್ಟೂ ಚರ್ಚೆಗೆ ಕಾರಣವಾಗಿದೆ. ಅದ್ರ ಏಳು ಬೀಳುಗಳ ಬಗ್ಗೆ ಗೌಡರು ತಲೆಕೆಡಿಸಿಕೊಂಡಿದ್ದು, ಇಂದಿನ ಸಭೆಯಲ್ಲಿ ಈ ಎಲ್ಲಾ ಗೊಂದಲಕ್ಕೆ ತೆರೆ ಬಿದ್ದು, ಅಭ್ಯರ್ಥಿ ಬಹುತೇಕ ಫೈನಲ್ ಆಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

News First Live Kannada


Leave a Reply

Your email address will not be published.