
ಸುರೇಶ್ ಕುಮಾರ್
ಲೋಕಾ ಸೇವಾ ಆಯೋಗದ ಕಾರ್ಯದರ್ಶಿ ಆಫೀಸ್ ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ರನ್ನು ಸಿಬ್ಬಂದಿ ಕಚೇರಿ ಒಳಗಡೆ ಬಿಟ್ಟಿಲ್ಲ. ಆಡಳಿತರೂಢ ಪಕ್ಷದ ಶಾಸಕರಿಗೇ ನೋ ಎಂಟ್ರಿ.. ಇನ್ನು ಸಾಮಾನ್ಯ ಅಭ್ಯರ್ಥಿಗಳ ಪಾಡೇನು?
ಬೆಂಗಳೂರು: 2021ರ ಫೆಬ್ರವರಿಯಲ್ಲಿ ನಡೆದ ಕೆಎಎಸ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಒಂದೂವರೆ ವರ್ಷದ ಬಳಿಕವೂ ಪ್ರಕಟವಾಗಿಲ್ಲ. ಹೀಗಾಗಿ ಕೆಪಿಎಸ್ಸಿ ಪರಿಕ್ಷಾ ಗೊಂದಲದ ಬಗ್ಗೆ ಮನವಿ ನೀಡಲು ಮಾಜಿ ಸಚಿವ ಸುರೇಶ್ ಕುಮಾರ್ ಕೆಪಿಎಸ್ಸಿ ಕಚೇರಿಯ ಬಾಗಿಲು ತಟ್ಟಿದ್ದಾರೆ. ಆದ್ರೆ ಆಡಳಿತ ಪಕ್ಷದ ಶಾಸಕ ಬಂದರೂ ಕರ್ನಾಟಕ ಲೋಕ ಸೇವಾ ಆಯೋಗ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.
ಲೋಕಾ ಸೇವಾ ಆಯೋಗದ ಕಾರ್ಯದರ್ಶಿ ಆಫೀಸ್ ಸ್ಟಾಫ್ ಕಳುಹಿಸಿ ಮನವಿ ಪತ್ರ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ರನ್ನು ಸಿಬ್ಬಂದಿ ಕಚೇರಿ ಒಳಗಡೆ ಬಿಟ್ಟಿಲ್ಲ. ಆಡಳಿತರೂಢ ಪಕ್ಷದ ಶಾಸಕರಿಗೇ ನೋ ಎಂಟ್ರಿ.. ಇನ್ನು ಸಾಮಾನ್ಯ ಅಭ್ಯರ್ಥಿಗಳ ಪಾಡೇನು? ಎಂಬಂತಾಗಿದೆ. ಅಲ್ಲದೆ ಸಿಬ್ಬಂದಿ ಫೋನ್ಗೆ ಕರೆ ಮಾಡಿ ಕಾರ್ಯದರ್ಶಿ ಸತ್ಯವತಿ ಮನವಿ ಆಲಿಸಿದ್ದಾರೆ.