ದಾವಣಗೆರೆ: ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ದಾವಣಗೆರೆಯ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ.

ಇತ್ತೀಚೆಗೆ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಯ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಸದ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗ್ತಿದೆ.

ಆದರೆ ಯಾವುದೇ ಕ್ಲಾಸ್​ ನಡೆಸದೇ ಕೇವಲ ಎರಡು ತಿಂಗಳ ಆನ್ಲೈನ್ ಕ್ಲಾಸ್ ಮಾಡಿದ್ದು ಮತ್ತು ಎರಡು ತಿಂಗಳ ಅಂತರದಲ್ಲಿ ಎರಡು ಸೆಮ್ ಗಳ ಪರೀಕ್ಷೆ ನಡೆಸುತ್ತಿರೋದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಶ್ವ ವಿದ್ಯಾಲಯ ನಡೆಸುತ್ತಿರುವ ಪರೀಕ್ಷೆಯನ್ನು ಕೋವಿಡ್​ ಮೂರನೇ ಅಲೆ ಆತಂಕದಲ್ಲಿ ಪರೀಕ್ಷೆ ನಡೆಸೋದು ಬೇಡ ಎನ್ನುತ್ತಿರುವ ವಿದ್ಯಾರ್ಥಿಗಳು ತಕ್ಷಣವೇ ಪರೀಕ್ಷೆಯನ್ನು ರದ್ದು ಮಾಡುವಂತೆ ತೊಳಹುಣಸೆಯಲ್ಲಿನ ವಿಶ್ವ ವಿದ್ಯಾಲಯದ ಮುಂಭಾಗ ಪ್ರತಿಭಟನೆಗೆ ನಿಂತಿದ್ದಾರೆ.

The post ‘ಪರೀಕ್ಷೆ ರದ್ದು ಮಾಡಿ’ ಅಂತ ವಿಶ್ವವಿದ್ಯಾಲಯದ ಮುಂದೆಯೇ ಪ್ರತಿಭಟನೆಗೆ ಕುಳಿತ ಸ್ಟುಡೆಂಟ್ಸ್ appeared first on News First Kannada.

Source: newsfirstlive.com

Source link