ಪರೀಕ್ಷೆ ವೇಳೆ ಓದುವಾಗ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು ಹೇಗೆ?; ಇಲ್ಲಿದೆ ಸರಳ ಉಪಾಯ | How to improve your Concentration During Exam Study


ಪರೀಕ್ಷೆ ವೇಳೆ ಓದುವಾಗ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು ಹೇಗೆ?; ಇಲ್ಲಿದೆ ಸರಳ ಉಪಾಯ

ಸಾಂದರ್ಭಿಕ ಚಿತ್ರ

ಪರೀಕ್ಷೆಯ ಸಂದರ್ಭದಲ್ಲಿ ಏಕಾಗ್ರತೆ ಪಡೆಯುವುದು ಹೇಗೆ? ಎಂಬುದು ಹಲವರ ಪ್ರಶ್ನೆ. ಪರೀಕ್ಷೆ ವೇಳೆ ಏಕಾಗ್ರತೆಯನ್ನು (Concentration) ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ, ಇಂಟರ್ನೆಟ್​ನ ಬಳಕೆ ಕಡಿಮೆ ಮಾಡುವುದು ಹೀಗೆ ನಾನಾ ದಾರಿಗಳಿವೆ. ಧ್ಯಾನವು ಏಕಾಗ್ರತೆಯನ್ನು ಸುಧಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ಕೇಳಿರಬಹುದು. ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಓದುವ ಮುನ್ನ ನೀವು ಶಾಂತವಾದ ಕೋಣೆಯಲ್ಲಿ ಕುಳಿತುಕೊಳ್ಳುವುದು ಅಗತ್ಯ. ಕೇವಲ 5 ನಿಮಿಷಗಳ ಧ್ಯಾನ ಅದ್ಭುತಗಳನ್ನು ಮಾಡಬಹುದು. ನಿಮಗೆ ಫೋಕಸ್ ಕೊರತೆಯಿದ್ದರೆ ಮತ್ತು ಇಂಟರ್ನೆಟ್‌ನಲ್ಲಿ (Online Browsing) ಸರ್ಫಿಂಗ್ ಮಾಡುವ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ, ಮೊಬೈಲನ್ನು ದೂರದಲ್ಲಿಡಿ. ನೀವು ಅಧ್ಯಯನ ಮಾಡಲು ಕುಳಿತುಕೊಳ್ಳುವ ಮೊದಲು, ನಿಮ್ಮ ಫೋನ್ ಅನ್ನು ಆಫ್ ಮಾಡಿ. ಇದು ನಿಮ್ಮ ಏಕಾಗ್ರತೆಯನ್ನು ಸುಧಾರಿಸಲು ಅತ್ಯುತ್ತಮ ಮಾರ್ಗವಾಗಿದೆ.

– ಓದುವಾಗ ನೈಸರ್ಗಿಕ ಬೆಳಕನ್ನು ಪಡೆಯುವ ಕೋಣೆಯಲ್ಲಿ ಕುಳಿತುಕೊಳ್ಳಲು ಮರೆಯಬೇಡಿ. ಉತ್ತಮ ಗಾಳಿ, ಬೆಳಕು ಬರುವುದರಿಂದ ಓದಿನ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಓದುವ ಮುನ್ನ ಇವತ್ತು ಎಷ್ಟು ಓದಬೇಕು, ಯಾವ ದಿನ ಏನನ್ನು ಓದಬೇಕೆಂದು ನೀವು ವೇಳಾಪಟ್ಟಿಯನ್ನು ಮಾಡಿಕೊಳ್ಳಿ. ನೀವು ಎರಡು ಗಂಟೆಗಳ ಕಾಲ ಅಧ್ಯಯನ ಮಾಡಿದರೂ ಸಂಪೂರ್ಣವಾದ ಫೋಕಸ್ ನೀಡುವುದು ಅಗತ್ಯ.

– ನೀವು ಓದುವ ಸ್ಟಡಿ ಟೇಬಲ್ ಮೇಲೆ ಮೊಬೈಲ್ ಇಡಬೇಡಿ. ಮೊಬೈಲ್ ಸ್ವಿಚಾಫ್ ಮಾಡಿ ದೂರದಲ್ಲಿಡಿ. ಓದುವಾಗ ಯಾವುದೇ ಕಿರಿಕಿರಿಗಳು ಆಗದಂತೆ ಎಚ್ಚರ ವಹಿಸಿ.

– ಓದಲು ಶುರು ಮಾಡುವ ಮೊದಲು ನಿಮ್ಮ ಮನಸಿನಲ್ಲಿ ಏನು ಅನಿಸುತ್ತದೆ ಎಂಬುದನ್ನು ನೋಟ್ ಮಾಡಿಕೊಳ್ಳಿ. ನೀವು ಓದಿದ್ದನ್ನು ಕೂಡ ಬ್ರೀಫ್ ಆಗಿ ನೋಟ್ ಮಾಡಿಟ್ಟುಕೊಳ್ಳಿ. ಯಾವೆಲ್ಲ ಅಂಶಗಳು ನಿಮ್ಮ ಮನಸನ್ನು ಚಂಚಲಗೊಳಿಸುತ್ತವೆ ಎಂಬುದನ್ನು ಬರೆದಿಟ್ಟುಕೊಳ್ಳಿ. ನಂತರ ಓದಲು ಶುರು ಮಾಡಿ.

– ಓದುವಾಗ ಮಧ್ಯೆ ಮಧ್ಯೆ ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿರಿ. ನಿರಂತರವಾಗಿ ಓದುವುದರಿಂದ ನಿಮ್ಮ ಏಕಾಗ್ರತೆ ಒಂದೇ ರೀತಿಯಲ್ಲಿರುವುದಿಲ್ಲ. ಹೀಗಾಗಿ ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿದ್ದರೆ ಮನಸು ರಿಫ್ರೆಶ್ ಆಗುತ್ತದೆ.

– ಓದಿನ ಮಧ್ಯೆ ಬ್ರೇಕ್ ತೆಗೆದುಕೊಂಡಾಗ ಮನಸನ್ನು ಏಕಾಗ್ರತೆಗೊಳಿಸಲು ಸಹಾಯ ಮಾಡುವ ಚೆಸ್, ಸುಡೊಕು ಮುಂತಾದ ಆಟಗಳನ್ನು ಆಡಿ.

TV9 Kannada


Leave a Reply

Your email address will not be published. Required fields are marked *