ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ: ಸಮರ್ಥಿಸಿಕೊಳ್ಳಲು ಬಿಜೆಪಿಯಿಂದ ಹೊಸ ವರಸೆ | BJP MP Tejasvi Surya Hits Back at Congress Over Paresh Mesta CBI Report


ಸಿಬಿಐ ತನಿಖಾ ವರದಿಯಿಂದ ಪರೇಶ್ ಮೇಸ್ತಾ ಸಾವು ಪ್ರಕರಣ ಹೊಸ ತಿರುವುಪಡೆದುಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಆರೋಪ-ಪತ್ಯಾರೋಪಗಳು ಶುರುವಾಗಿವೆ.

ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ:  ಸಮರ್ಥಿಸಿಕೊಳ್ಳಲು ಬಿಜೆಪಿಯಿಂದ ಹೊಸ ವರಸೆ

ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಪರೇಶ್ ಮೇಸ್ತಾನನ್ನು ಕೊಲೆ ಮಾಡಿಲ್ಲ. ಅದೊಂದು ಸಹಜ ಸಾವು ಎಂದು ಸಿಬಿಐ ವರದಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಕೋಮುಬಣ್ಣ ಹಚ್ಚಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಳಿದು ರಾಜಕೀಯ ಮೈಲೇಜ್ ಪಡೆದುಕೊಂಡಿತ್ತು.

ಇದೀಗ ಪರೇಶ್ ಮೇಸ್ತಾ ಕೇಸ್​ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸಿಬಿಐ ವರದಿ ಇದೀಗ ಆಡಳಿತರೂಢ ಬಿಜೆಪಿಗೆ ಇರುಸುಮುರುಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ನಾಯಕರು ಹೊಸ ವರಸೆ ಶುರು ಮಾಡಿದ್ದಾರೆ.

TV9 Kannada


Leave a Reply

Your email address will not be published.