ಭಾರತದಲ್ಲಿ ಹೊಸ ಪರ್ಸನಲೈಸೇಶನ್ ವೈಶಿಷ್ಟ್ಯವನ್ನು ಪರಿಚಯಿಸಲು ಗೂಗಲ್ ಪೇ ಸಜ್ಜಾಗಿದೆ, ಸಂಬಂಧಿತ ವ್ಯವಹಾರಗಳು ಮತ್ತು ಉತ್ತಮ ಶಿಫಾರಸುಗಳನ್ನು  ಇದು ನೀಡಲಿದೆ. ಆದಾಗ್ಯೂ, ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದರೆ, ನಿಮ್ಮ ವಹಿವಾಟಿನ ಹಿಸ್ಟರಿ, ನಿಮ್ಮ ಪಾವತಿ ಪ್ರಕಾರಗಳು ಮತ್ತು ಇತರ ಡೇಟಾದಂತಹ ಸೂಕ್ಷ್ಮ ಮಾಹಿತಿಗೆ ಗೂಗಲ್ ಪ್ರವೇಶವನ್ನು ಪಡೆಯುತ್ತದೆ.

ಹೊಸ “Google Pay ನೊಂದಿಗೆ ಪರ್ಸನಲೈಸೇಶನ್ ” ವೈಶಿಷ್ಟ್ಯವನ್ನು ಅಪ್ಲಿಕೇಶನ್‌ ನ ಸೆಟ್ಟಿಂಗ್‌ ಗಳಲ್ಲಿ ಯಾವುದೇ ಸಮಯದಲ್ಲಿ ಟಾಗಲ್ ಮಾಡಬಹುದಾಗಿದೆ.

ಓದಿ :  ಭೂಪಿಂದರ್ ಸಿಂಗ್ ಹೂಡಾ ವರ್ತನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

ಟೆಕ್ ದೈತ್ಯ ಗೂಗಲ್ ಬ್ಲಾಗ್ ಪೋಸ್ಟ್ ಮೂಲಕ ಈ ವೈಶಿಷ್ಟ್ಯವನ್ನು ಘೋಷಿಸಿದೆ, ಇದು ಮುಂದಿನ ವಾರದಿಂದ ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಹೊರಹೊಮ್ಮಲಿದೆ ಎಂದು ಖಚಿತಪಡಿಸುತ್ತದೆ. ಬಳಕೆದಾರರು ಗೂಗಲ್ ಪೇ ನ ಮುಂದಿನ ಆವೃತ್ತಿಗೆ ಅಪ್‌ ಗ್ರೇಡ್ ಮಾಡಿದ ತಕ್ಷಣ, ನಿಯಂತ್ರಣವನ್ನು ಆನ್ ಅಥವಾ ಆಫ್ ಮಾಡಲು ಬಯಸುತ್ತಾರೆಯೇ ಎಂದು ಆಯ್ಕೆ ಮಾಡಲು ಕೇಳಲಾಗುತ್ತದೆ.

ನೀವು ವೈಶಿಷ್ಟ್ಯವನ್ನು ಆನ್ ಮಾಡಿದರೆ, ನಿಮ್ಮ ವಹಿವಾಟಿನ ಹಿಸ್ಟರಿ, ಲಾಯಲ್ಟಿ ಕಾರ್ಡ್‌ ಗಳಂತಹ ವಿಷಯಗಳಿಗೆ ಗೂಗಲ್ ಪ್ರವೇಶವನ್ನು ಪಡೆಯುತ್ತದೆ.

“account.google.com ಗೆ ಭೇಟಿ ನೀಡುವ ಮೂಲಕ ನಿಮ್ಮ ವೈಯಕ್ತಿಕ ವ್ಯವಹಾರಗಳು ಮತ್ತು ಚಟುವಟಿಕೆಯನ್ನು Google Pay ನಲ್ಲಿನ ಪರ್ಸನಲೈಸೇಶನ್ ಹೇಗೆ ಬಳಸಲಾಗುತ್ತದೆ ಎಂಬುದನ್ನು ಸಹ ನೀವು ನಿರ್ವಹಿಸಲು ಸಾಧ್ಯವಾಗಲಿದೆ.

ಓದಿ : ಪ.ಬಂಗಾಳ : ಸಿಪಿಎಂ ಅಭ್ಯರ್ಥಿಯಾಗಿ JNU ವಿದ್ಯಾರ್ಥಿ ಸಂಘದ ಹಾಲಿ ನಾಯಕಿ ಆಯಿಷಾ ಘೋಷ್..!

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More