ಚಿತ್ರದುರ್ಗ: ರಸ್ತೆಯಲ್ಲಿ ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಲಾರಿಯೊಂದು ಪಲ್ಟಿಯಾಗಿದ್ದು, ಈ ವೇಳೆ ಲಾರಿಯಲ್ಲಿದ್ದ ಕ್ಲೀನರ್​​ ವಾಹನದ ಕೆಳಗೆ ಸಿಲುಕಿ ನರಳಾಡಿದ ಘಟನೆ ಜಿಲ್ಲೆ ಹಿರಿಯೂರು ತಾಲೂಕಿನ ಉಡುವಳ್ಳಿ ಬಳಿ ನಡೆದಿದೆ.

ಲಾರಿಯಡಿ ಸಿಲುಕಿದ್ದ ಕ್ಲೀನರ್ ರಕ್ಷಣೆಗೆ ಜೋರಾಗಿ ಕೂಗಿ ಕೊಳ್ಳುತ್ತಿದ್ದ. ಅದೇ ಮಾರ್ಗವಾಗಿ ಬರುತ್ತಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹಾಗೂ ಅಧಿಕಾರಿಗಳು ಘಟನೆಯಲ್ಲಿ ಗಾಯಗೊಂಡಿದ್ದ ಡ್ರೈವರ್​ ಹಾಗೂ ಕ್ಲೀನರ್​​​ಅನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಆ್ಯಂಬುಲೆನ್ಸ್​ ತರಿಸಿ ಗಾಯಾಳುಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಪಲ್ಟಿ ಹೊಡೆದ ಲಾರಿಯಡಿ ಸಿಲುಕಿ ನರಳುತ್ತಿದ್ದ ಕ್ಲೀನರ್​ ರಕ್ಷಿಸಲು ನೆರವಾದ ಚಿತ್ರದುರ್ಗ ಡಿಸಿ appeared first on News First Kannada.

Source: newsfirstlive.com

Source link