
ಪೂಜಾ-ಪವನ್ ಕಲ್ಯಾಣ್
ಚಿತ್ರದ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಪೂಜಾ ಹೆಗ್ಡೆ ಅವರಿಗೆ ಕಿರಿಕಿರಿ ಆಗಿದೆ. ಹೀಗಾಗಿ, ಅವರು ಚಿತ್ರವನ್ನು ಕೈಬಿಟ್ಟಿದ್ದಾರಂತೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಕೆಲ ಹೀರೋ/ಹೀರೋಯಿನ್ಗಳು ಕಥೆ ಅಥವಾ ಪಾತ್ರ ಇಷ್ಟವಾಗಿ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆದರೆ, ಅಂದುಕೊಂಡ ದಿನಾಂಕದಂದು ಸಿನಿಮಾ ಸೆಟ್ಟೇರುವುದಿಲ್ಲ. ಈ ಕಾರಣ ನೀಡಿ ಕಲಾವಿದರು ಚಿತ್ರದಿಂದ ಹೊರ ನಡೆದ ಸಾಕಷ್ಟು ಉದಾಹರಣೆ ಇದೆ. ಈಗ ಪೂಜಾ ಹೆಗ್ಡೆ (Pooja Hegde) ವಿಚಾರದಲ್ಲೂ ಹೀಗೆಯೇ ಆಗಿದೆ. ‘ಭವದೀಯುಡು ಭಗತ್ ಸಿಂಗ್’ ಚಿತ್ರದಲ್ಲಿ (Bhavadeeyudu Bhagat Singh) ಪವನ್ ಕಲ್ಯಾಣ್ಗೆ (Pawan Kalyan) ಜತೆಯಾಗಿ ಅವರು ನಟಿಸಬೇಕಿತ್ತು. ಆದರೆ, ಸಿನಿಮಾ ಪದೇಪದೇ ವಿಳಂಬ ಆಗುತ್ತಿರುವುದರಿಂದ ಪೂಜಾ ಹೆಗ್ಡೆ ಮುನಿಸಿಕೊಂಡಿದ್ದಾರೆ. ಅವರು ಸಿನಿಮಾದಿಂದಲೇ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.
ಹರೀಶ್ ಶಂಕರ್ ಅವರು ಭವದೀಯುಡು ಭಗತ್ ಸಿಂಗ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಈ ಮೊದಲೇ ಸೆಟ್ಟೇರಬೇಕಿತ್ತು. ಆದರೆ, ಚಿತ್ರದ ಕೆಲಸಗಳು ತಡವಾದವು. ಪವನ್ ಕಲ್ಯಾಣ್ ಅವರು ಬೇರೆಬೇರೆ ಕಾರಣ ನೀಡಿ ಸಿನಿಮಾ ಸೆಟ್ಟೇರುವುದು ಮುಂದೂಡುತ್ತಲೇ ಬಂದಿದ್ದಾರೆ. ಈಗ ಪವನ್ ಕಲ್ಯಾಣ್ ಅವರು ‘ವಿನೋದಯಾ ಸೀತಂ’ ಚಿತ್ರ ರಿಮೇಕ್ ಮಾಡುವುದರ ಮೇಲೆ ಆಸಕ್ತಿ ತೋರಿದ್ದಾರೆ. ಇದರಿಂದ ಹರೀಶ್ ಶಂಕರ್ ಚಿಂತೆಗೆ ಒಳಗಾಗಿದ್ದಾರೆ.