ಪವರ್​ಸ್ಟಾರ್​ ಪುನೀತ್​​ ರಾಜ್​​ಕುಮಾರ್​ರನ್ನ ಭೇಟಿಯಾದ ‘ಸಲಗ’

ಸ್ಯಾಂಡಲ್​ವುಡ್​ನ ಬ್ಲಾಕ್​ ಕೋಬ್ರಾ ದುನಿಯಾ ವಿಜಿ ನಟಿ ನಿರ್ದೇಶಿಸಿರುವ ‘ಸಲಗ’ ಸಿನಿಮಾ ಇದೇ ಅಕ್ಟೋಬರ್​ 14ನೇ ತಾರೀಖು ರಿಲೀಸ್​ ಆಗಲಿದೆ. ಈಗಾಗಲೇ ಸಿನಿಮಾ ಪ್ರಚಾರದ ಕಾರ್ಯದಲ್ಲಿ ಬ್ಯುಸಿ ಇರುವ ಸಲಗ ಫೀಲ್ಮ್​ ಟೀಮ್​. ಇದೀಗ ಚಿತ್ರದ ಟ್ರೈಲರ್ ಲಾಂಚ್​ ಕಾರ್ಯಕ್ರಮದ ತಯಾರಿಯಲಿದೆ. ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ರೈಲರ್ ಲಾಂಚ್​ ಕಾರ್ಯಕ್ರಮಕ್ಕೆ ಆಥಿತಿಯಾಗಿ ಬರುವಂತೆ ಆಹ್ವಾನಿಸಿದ ಸಲಗ ಬಳಗ, ಇದೀಗ ಸ್ಯಾಂಡಲ್​ವುಡ್​​ನ ಮತ್ತೊಬ್ಬ ಸ್ಟಾರ್​ ನಟನಿಗೆ ಕಾರ್ಯಕ್ರಮಕ್ಕೆ ಆಥಿತಿಯಾಗಿ ಬರಲು ಆಹ್ವಾನ ನೀಡಿದ್ದಾರೆ.

ಹೌದು, ನಾವು ನಿಮಗೆ ಮೊದಲೇ ಹೇಳಿದ್ವಿ ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಲಗ ಚಿತ್ರದ ಟ್ರೈಲರ್​ರನ್ನ ಬಿಡುಗಡೆ ಮಾಡಲಿದ್ದಾರೆ ಅಂತ. ಅದರಂತೇ ಇದೀಗ ಸಲಗ ಟೀಮ್​ ಪುನೀತ್​ರನ್ನ ಭೇಟಿಯಾಗಿ ಸಲಗ ಚಿತ್ರದ ಟ್ರೈಲರ್ ಲಾಂಚ್​ ಕಾರ್ಯಕ್ರಮಕ್ಕೆ ಆಥಿಯಾಗಿ ಬರುವಂತೆ ಆಹ್ವಾನ ನೀಡಿದ್ದಾರೆ. 3 ದಿನನಗಳ ಕಾಲ ಸಲಗ ಚಿತ್ರದ ಪ್ರೋಮೋಶನಲ್​ ಇವೆಂಟ್​ಗಳು ನಡೆಯಲಿದ್ದು, 10ನೇ ತಾರೀಖು ಚಿತ್ರ ಟ್ರೈಲರ್​ ಲಾಂಚ್​ ಕಾರ್ಯಕ್ರಮ ನಡೆಯಲಿದೆ. ಸದ್ಯ ಪುನೀತ್​ ಮತ್ತು ದುನಿಯಾ ವಿಜಿ ಜೊತೆಗಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

The post ಪವರ್​ಸ್ಟಾರ್​ ಪುನೀತ್​​ ರಾಜ್​​ಕುಮಾರ್​ರನ್ನ ಭೇಟಿಯಾದ ‘ಸಲಗ’ appeared first on News First Kannada.

News First Live Kannada

Leave a comment

Your email address will not be published. Required fields are marked *