ಪವರ್ ಪ್ಲೇನಲ್ಲಿಯೇ ಪವರ್ ಕಳೆದುಕೊಳ್ಳುವ ರೋಹಿತ್ ಫಾರ್ಮ್​ಗೆ ಮರಳುವುದು ಯಾವಾಗ? – Rohit sharmas poor form only 52 runs in powerplay 4 timesout t20 world cup 2022


T20 World Cup 2022: ವಿಶ್ವಕಪ್‌ನ ಐದು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಕೇವಲ 52 ರನ್ ಗಳಿಸಿ, 4 ಬಾರಿ ಪವರ್​ ಪ್ಲೇನಲ್ಲಿಯೇ ಔಟಾಗಿದ್ದಾರೆ.

ಎಲ್ಲಾ ನಿರೀಕ್ಷೆಗಳಿಗೆ ತಕ್ಕಂತೆ ಭಾರತ ತಂಡ 2022 ರ ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ ತಲುಪಿದೆ. ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಅತ್ಯಂತ ಸುಲಭವಾಗಿ ಸೋಲಿಸಿದ ಟೀಂ ಇಂಡಿಯಾ (Team India) ಬಲಿಷ್ಠ ಶೈಲಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಪ್ರಶಸ್ತಿಗೆ ಇನ್ನೆರಡು ಹೆಜ್ಜೆಗಳು ಬಾಕಿಯಿದ್ದು, ಭಾರತ ತಂಡ ಪಂದ್ಯವಾರು ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿರುವ ರೀತಿಯಲ್ಲಿ ತಂಡವನ್ನು ಪ್ರಶಸ್ತಿಗೆ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ. ಇದರ ಹೊರತಾಗಿಯೂ, ಟೀಮ್ ಇಂಡಿಯಾಗೆ ಒಂದು ಕಾಳಜಿ ಉಳಿದಿದೆ. ಅದು ನಾಯಕ ರೋಹಿತ್ ಶರ್ಮಾ (Rohit Sharma) ಅವರ ಫಾರ್ಮ್.

ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಆರಂಭಿಕ ಜೋಡಿಯ ಬಗ್ಗೆ ಆತಂಕಗಳು ಹುಟ್ಟಿಕೊಂಡಿದ್ದವು. ಇದಕ್ಕೆ ಪೂರಕವೆಂಬಂತೆ ಇಲ್ಲಿಯವರೆಗಿನ ಟೂರ್ನಿಯಲ್ಲಿ ಈ ಜೋಡಿ ಯಶಸ್ವಿಯಾಗಲೇ ಇಲ್ಲ. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಆಡಿದ ಐದು ಪಂದ್ಯಗಳಲ್ಲೂ ಉತ್ತಮ ಆರಂಭ ನೀಡುವಲ್ಲಿ ಈ ಜೋಡಿ ವಿಫಲವಾಯಿತು. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಪಂದ್ಯಾವಳಿಯಲ್ಲಿ ಒಮ್ಮೆಯೂ ವೇಗವಾಗಿ ಅಥವಾ ದೊಡ್ಡ ಜೊತೆಯಾಟವನ್ನು ಮಾಡಲು ಸಾಧ್ಯವಾಗಲಿಲ್ಲ.

ಪವರ್‌ಪ್ಲೇಯಲ್ಲಿ ರೋಹಿತ್ ಇನ್ನಿಂಗ್ಸ್ ಅಂತ್ಯ

ಇದರಲ್ಲೂ ಮೊದಲ ಮೂರು ಪಂದ್ಯಗಳ ವೈಫಲ್ಯದ ನಂತರ ಕೆಎಲ್ ರಾಹುಲ್ ಸತತ ಎರಡು ಅರ್ಧಶತಕ ಬಾರಿಸಿದ್ದರೂ ನಾಯಕ ರೋಹಿತ್ ಇನ್ನೂ ಫಾರ್ಮ್​ನಲ್ಲಿ ಕಾಣಿಸಿಕೊಂಡಿಲ್ಲ. ವಿಶ್ವಕಪ್‌ನ ಐದು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಪವರ್‌ಪ್ಲೇನಲ್ಲಿ ಕೇವಲ 52 ರನ್ ಗಳಿಸಿ, 4 ಬಾರಿ ಔಟಾಗಿದ್ದಾರೆ. ಈ 52 ರನ್‌ಗಳಲ್ಲಿ ಅತ್ಯಂತ ತ್ರಾಸದಾಯಕ ವಿಷಯವೆಂದರೆ ಅವರ ಸ್ಟ್ರೈಕ್ ರೇಟ್, ಅದು ಕೇವಲ 89.65.

TV9 Kannada


Leave a Reply

Your email address will not be published.