ಸ್ಯಾಂಡಲ್​ವುಡ್​​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಸಿನಿಮಾ ಡೈರೆಕ್ಷನ್​ ಮಾಡಲು ನಿರ್ದೇಶಕರು ತುದಿಗಾಲಿನಲ್ಲಿ ನಿಂತಿರ್ತಾರೆ. ಆದ್ರೆ ಎಲ್ಲರಿಗೂ ಆ​ ಚಾನ್ಸ್​ ದಕ್ಕೋದಿಲ್ಲ. ಎಲ್ಲಾ ನಟರು ಒಂದೊಳ್ಳೆ​ ಕಥೆಗಾಗಿ ಕಾದಿರುತ್ತಾರೆ. ಆದ್ರೆ ಎಲ್ಲರಿಗೂ ಅಂತ​ ಕಥೆಗಳು ಸಿಕ್ಕೋದಿಲ್ಲ. ಪವರ್​ ಸ್ಟಾರ್​ ಪುನೀತ್​ಗಾಗಿ ಲೂಸಿಯಾ ಖ್ಯಾತಿಯ ಪವನ್​ ಕುಮಾರ್​ ಮಾಡಿಕೊಂಡಿರುವ ಕಥೆ ಸಖತ್​ ಪವರ್​ಫುಲ್​ ಆ್ಯಂಡ್​ ಮೀನಿಂಗ್​ಫುಲ್ ​ಆಗಿದೆ ಎನ್ನಲಾಗುತ್ತಿದೆ.

ಯುವರತ್ನ ಸಿನಿಮಾವನ್ನ ಯಶಸ್ವಿಯಾಗಿ ಕನ್ನಡಿಗರ ಮನೆ ಮನಕ್ಕೆ ಸೇರಿಸಿರುವ ಪವರ್​ ಸ್ಟಾರ್​ ಸದ್ಯ ಜೇಮ್ಸ್​ ಸಿನಿಮಾದ ಶೂಟಿಂಗ್​​​​​ನಲ್ಲಿ ಮಗ್ನರಾಗಿದ್ದಾರೆ. ಈ ಕೊರೊನಾ ಎರಡನೇ ಅಲೆಯಿಂದ ಆಗಿರೋ ವೀಕೆಂಡ್​ ಲಾಕ್​ಡೌನ್​, ಕರ್ಪ್ಯೂ ಇತ್ಯಾದಿ ನಿಬಂಧನೆಗಳು ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಜೇಮ್ಸ್​ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ ಬಿಡುತ್ತಿತ್ತೇನೋ. ಆದ್ರೆ ಇನ್ನು 25 ಪರ್ಸೆಂಟ್​ ಶೂಟಿಂಗ್​ ಬಾಕಿ ಉಳಿಸಿಕೊಂಡಿದೆ ಜೇಮ್ಸ್​ ತಂಡ.

ಈಗ ವಿಷಯಕ್ಕೆ ಬಂದು ಬಿಡೋಣ. ಪವನ್​ ಕುಮಾರ್​, ಪುನೀತ್​ ರಾಜ್​ ಕುಮಾರ್​ ಅವರಿಗೆ ಡೈರೆಕ್ಷನ್​ ಮಾಡಲು ಹೊರಟಿರುವ ಕಥೆ ಯಾವುದು ಅನ್ನೋ ಸ್ವಾರಸ್ಯವನ್ನ ಹೇಳ್ತೀವಿ ಕೇಳಿ. ನಿರ್ದೇಶಕ ಪವನ್​ ಕುಮಾರ್​ ಮಾಡಲು ಹೊರಟಿರುವ ಪುನೀತ್​ ಸಿನಿಮಾ ಸಬ್ಜೆಕ್ಟ್​  ವಿಶೇಷವಾದದ್ದು. ಈ ಹಿಂದೆನೇ ಪವನ್​ ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡ ಸಿನಿ ಕಥೆ ಅದು.

ಪವನ್​ ಅಪ್ಪುಗಾಗಿ ಮಾಡಲು ಹೊರಟಿರುವ ಈ ಸ್ಟೋರಿ ಬಹಳ ಹಿಂದೆ ದೂದ್​​ಪೇಡ ದಿಗಂತ್​ ಅವರಿಗೆ ಮಾಡಿದ್ದಂತೆ. ಮತ್ತೊಂದು ಇಂಟ್ರಸ್ಟಿಂಗ್​ ವಿಚಾರ ಏನಂದ್ರೆ ಪವನ್​ ಅಪ್ಪುಗಾಗಿ ಮಾಡ್ತಿರೋ ಈ ಕಥೆಯನ್ನ ಅಲ್ಲು ಅರ್ಜುನ್​ ಅವರಿಗೂ ಹೇಳಿದ್ರಂತೆ. ಆದ್ರೆ ಈಗ ಪುನೀತ್​ ಅವರ ಪಾಲಿಗೆ ಪವನ್​ ಮಾಡಿದ್ದ ಕಥೆ ಸಿನಿಮಾವಾಗುತ್ತಿದೆ. ಹಾಗಾದ್ರೆ ಯಾವುದು ಆ ಕಥೆ ಅನ್ನೋ ಪ್ರಶ್ನೆಗೆ ಉತ್ತರ ನಿಕೋಟಿನ್​.

ನಿಕೋಟಿನ್​ ಪವನ್​ ಕುಮಾರ್​ ಪುನೀತ್​ಗೆ ಮಾಡಲು ಹೊರಟಿರುವ ಸಿನಿಮಾ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಪವನ್​ ಏನೇ ಮಾಡಿದ್ರು ಸಖತ್​ ಯೂನಿಕ್​ ಆಗಿ ಇರುತ್ತದೆ. ಪವನ್​ ನಿರ್ದೇಶಿಸಿದ ಸಿನಿಮಾಗಳು ಈಗಾಗಲೇ ಅನ್ಯ ಭಾಷೆಗಳಿಗೆ ರಿಮೇಕ್​ ಆಗಿರೋದು ಇದಕ್ಕೆ ತಾಜಾ ಎಕ್ಸಾಂಪಲ್​. ಒಟ್ಟಿನಲ್ಲಿ ಹೊಂಬಾಳೆ ಬ್ಯಾನರ್​ ನಿರ್ಮಾಣದ ಪವನ್​ ಮತ್ತು ಪುನೀತ್​ ಸಿನಿಮಾ ಸಖತ್​ ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ.

The post ಪವರ್ ಸ್ಟಾರ್​​​ಗೆ ಪವನ್​ ಮಾಡಿರೋ ಕಥೆ ಯಾವುದು ಗೊತ್ತಾ..? ಈ ಕಥೆಯನ್ನ ಅಲ್ಲೂ ಅರ್ಜುನ್​ಗೂ ಹೇಳಿದ್ರಂತೆ ನಿರ್ದೇಶಕ appeared first on News First Kannada.

Source: News First Kannada
Read More