ಪವಾರ್‌ ಜೊತೆ 3ನೇ ಬಾರಿ ಪ್ರಶಾಂತ್ ಕಿಶೋರ್ ಚರ್ಚೆ.. ಕುತೂಹಲ ಮೂಡಿಸಿದ ಭೇಟಿ

ಪವಾರ್‌ ಜೊತೆ 3ನೇ ಬಾರಿ ಪ್ರಶಾಂತ್ ಕಿಶೋರ್ ಚರ್ಚೆ.. ಕುತೂಹಲ ಮೂಡಿಸಿದ ಭೇಟಿ

ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್​ರನ್ನು ಪುನಃ ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಹದಿನೈದು ದಿನಗಳ ಅಂತರದಲ್ಲಿ ಈ ನಾಯಕರ ಮಧ್ಯೆ ನಡೆದ ಮೂರನೇ ಭೇಟಿ ಇದಾಗಿದೆ.

ಪವಾರ್‌ ಅವರ ನಿವಾಸದಲ್ಲಿ ಮಂಗಳವಾರ ಎಂಟು ವಿರೋಧಪಕ್ಷಗಳ ನಾಯಕರ ಸಭೆ ನಡೆದಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಪವಾರ್‌ ಅವರೇ ವಹಿಸಿದ್ದರು. ಈಗ ಮತ್ತೆ ಪ್ರಶಾಂತ್​ರನ್ನ ಭೇಟಿಯಾಗಿರೋದ್ರ ಹಿಂದಿನ ಕಾರಣವೇನೆಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪವಾರ್‌–ಕಿಶೋರ್‌ ಅವರ ಈ ಮಾತುಕತೆ, ವಿರೋಧಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿಯ ವಿರುದ್ಧ ಬಲಿಷ್ಠವಾದ ತೃತೀಯ ರಂಗದ ರಚನೆಯ ಪ್ರಯತ್ನ ಎಂದು ಹೇಳಲಾಗುತ್ತಿದೆ.

The post ಪವಾರ್‌ ಜೊತೆ 3ನೇ ಬಾರಿ ಪ್ರಶಾಂತ್ ಕಿಶೋರ್ ಚರ್ಚೆ.. ಕುತೂಹಲ ಮೂಡಿಸಿದ ಭೇಟಿ appeared first on News First Kannada.

Source: newsfirstlive.com

Source link