ಕೊಲ್ಕತ್ತಾ: ಇಂದು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ 8ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಈ ಕೊನೆಯ ಹಂತದಲ್ಲಿ 35 ವಿಧಾನಾಸಭಾ ಕ್ಷೇತ್ರಗಳಿಗೆ ಮತದಾನವಾಗ್ತಿದೆ.

35 ವಿಧಾನ ಸಭಾ ಕ್ಷೇತ್ರಗಳಲ್ಲಿ, 283 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 11 ಸಾವಿರದ 860 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಸಂಜೆ 6.30 ರವರೆಗೆ ನಡೆಯಲಿದೆ. ಈ ಮೂಲಕ ಪಂಚರಾಜ್ಯಗಳ ಚುನಾವಣೆಗೆ ಇಂದು ತೆರೆಬೀಳಲಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.

The post ಪಶ್ಚಿಮ ಬಂಗಾಳದಲ್ಲಿ ಇಂದು ಕೊನೇ ಹಂತದ ಮತದಾನ appeared first on News First Kannada.

Source: newsfirstlive.com

Source link