ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ದೊಡ್ಡ ಪ್ರಮಾಣದ ಗೆಲುವು ಸಾಧಿಸಿದ ಬೆನ್ನಲ್ಲೇ, ರಾಜಕೀಯ ವಿರೋಧಿಗಳ ಮೇಲೆ ಹಿಂಸೆ ಮಿತಿ ಮೀರಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರದ ಗೃಹ ಇಲಾಖೆಯಿಂದ 4 ಜನರಿರೋ ತಂಡವನ್ನ ಬಂಗಾಳಕ್ಕೆ ಕಳುಹಿಸಿದ ಕೇಂದ್ರ ಸರ್ಕಾರ. ಚುನಾವಣಾ ಫಲಿತಾಂಶದ ದಿನ ಮತ್ತು ನಂತರದ ದಿನದಲ್ಲಿ ನಡೆದ ಹತ್ಯೆಗಳ ಹಿನ್ನಲೆಯಿಂದ ಈ ತಂಡವನ್ನ ರಚಿಸಲಾಗಿದೆ. ಸದ್ಯದ ಪರಿಸ್ಥಿತಿ ಮತ್ತು ನಡೆದ ಘಟನೆ ಬಗ್ಗೆ ವರದಿಯನ್ನ ಈ ತಂಡ ತರಲಿದೆಯಂತೆ. ಈವರೆಗೂ ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರ ಗುಂಡಾ ವರ್ತನೆಗೆ ಬಿಜೆಪಿಯ ಒಟ್ಟು 14 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಈಗಾಗ್ಲೇ, ಕೇಂದ್ರ ಸರ್ಕಾರ, ಬಂಗಾಳದ ರಾಜ್ಯಪಾಲರಿಗೂ ಈ ಬಗ್ಗೆ ಗಮನಹರಿಸುವಂತೆ ಹೇಳಿದ್ದಾಗಿದೆ. ಹೀಗಾಗಿ, 4 ಜನರ ತಂಡವನ್ನ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.

The post ಪಶ್ಚಿಮ ಬಂಗಾಳದಲ್ಲಿ 4ಜನರಿರೋ ತಂಡ ರಚಿಸಿದ ಕೇಂದ್ರ ಗೃಹ ಇಲಾಖೆ appeared first on News First Kannada.

Source: newsfirstlive.com

Source link