ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ದೊಡ್ಡ ಪ್ರಮಾಣದ ಗೆಲುವು ಸಾಧಿಸಿದ ಬೆನ್ನಲ್ಲೇ, ಹಿಂಸೆ ಮಿತಿ ಮೀರಿದೆ. ರಾಜಕೀಯ ವಿರೋಧಿಗಳ ಮೇಲೆ ಹಲ್ಲೆ, ದಾಳಿ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಸಾಕಷ್ಟು ವರದಿಯಾಗ್ತಿದೆ.

ಈ ಹಿನ್ನೆಲೆಯಲ್ಲಿ ಹಿಂಸಾಚಾರದ ಬಗ್ಗೆ ಪರಿಶಿಲಿಸಲು ಕೇಂದ್ರ ಗೃಹ ಸಚಿವಾಲಯ 4 ಜನರ ತಂಡವನ್ನ ಪಶ್ಚಿಮ ಬಂಗಾಳಕ್ಕೆ ಕಳುಹಿಸಿದೆ. ಚುನಾವಣಾ ಫಲಿತಾಂಶದ ದಿನ ಮತ್ತು ನಂತರದ ದಿನದಲ್ಲಿ ನಡೆದ ಹತ್ಯೆಗಳ ಹಿನ್ನೆಲೆ ಈ ತಂಡವನ್ನ ರಚಿಸಲಾಗಿದೆ. ಸದ್ಯದ ಪರಿಸ್ಥಿತಿ ಮತ್ತು ನಡೆದ ಘಟನೆ ಬಗ್ಗೆ ಈ ತಂಡ ವರದಿಯನ್ನ ತರಲಿದೆಯಂತೆ. ಈವರೆಗೂ ಬಂಗಾಳದಲ್ಲಿ ಟಿಎಂಸಿ ಬೆಂಬಲಿಗರ ಗುಂಡಾ ವರ್ತನೆಗೆ ಬಿಜೆಪಿಯ ಒಟ್ಟು 14 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈಗಾಗ್ಲೇ, ಕೇಂದ್ರ ಸರ್ಕಾರ ಬಂಗಾಳದ ರಾಜ್ಯಪಾಲರಿಗೂ ಈ ಬಗ್ಗೆ ಗಮನಹರಿಸುವಂತೆ ಹೇಳಿದ್ದಾಗಿದೆ. ಹೀಗಾಗಿ, 4 ಜನರ ತಂಡವನ್ನ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.

The post ಪಶ್ಚಿಮ ಬಂಗಾಳದಲ್ಲಿ 4 ಜನರ ತಂಡ ರಚಿಸಿದ ಕೇಂದ್ರ ಗೃಹ ಸಚಿವಾಲಯ appeared first on News First Kannada.

Source: newsfirstlive.com

Source link