ನವದೆಹಲಿ: ಟಿಎಂಸಿ (ತೃಣಮೂಲ ಕಾಂಗ್ರೆಸ್) ಪಕ್ಷದ ಹಿರಿಯ ನಾಯಕ ಸುಬ್ರತ್ ಮುಖರ್ಜಿ (75) ವಿಧಿವಶರಾಗಿದ್ದಾರೆ. ಇವರು ಮಮತಾ ಬ್ಯಾನರ್ಜಿ ಕ್ಯಾಬಿನೆಟ್ನಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿದ್ದರು.
ಸುಬ್ರತಾ ಅವರಿಗೆ ಹೃದಯಾಘಾತ ಸಂಭವಿಸಿ ಅಕ್ಟೋಬರ್ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ರು. ಅವರ ಆರೋಗ್ಯದಲ್ಲಿ ಸಧಾರಣೆ ಕಂಡು ಡಿಸ್ಚಾರ್ಜ್ ಮಾಡಬೇಕು ಅಂದಾಗ, ನಿನ್ನೆ ಮತ್ತೆ ಹೃದಯಾಘಾತ ಸಂಭವಿಸಿ ಉಸಿರು ನಿಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಬ್ರತಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಆನಂತರ ಮಾತನಾಡಿದ ದೀದಿ, ಸುಬ್ರತರನ್ನ ಕಳೆದುಕೊಂಡಿದ್ದು, ಪಶ್ಚಿಮ ಬಂಗಾಳಕ್ಕೆ ಮತ್ತು ನಮಗೆ ತುಂಬಾ ದೊಡ್ಡ ನಷ್ಠ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಕಂಬನಿ ಮಿಡಿದಿದ್ದಾರೆ.