ಪಶ್ಚಿಮ ಬಂಗಾಳ: ಪಶ್ಚಿಮ ಬಂಗಳಾದ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗ ಮಾತನಾಡಿದ ಅವ್ರು, ರಾಜ್ಯಪಾಲ ಜಗದೀಪ್ ಧನಕರ್​ ದೊಡ್ಡ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಕಿತ್ತೊಗೆಯುವಂತೆ ನಾನು ಮೂರು ಬಾರಿ ಪತ್ರ ಬರೆದಿದ್ದೇನೆ. ಅವರು ಭ್ರಷ್ಟಾಚಾರಿ. 1996ರ ಹವಾಲ ಜೈನ್‌ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಉಲ್ಲೇಖಿಸಲಾಗಿದೆ. ಆದ್ರೆ, ಅವರು ಕೋರ್ಟ್​​ಗೆ ಹೋಗಿ ಕ್ಲಿಯರ್​​ ಮಾಡಿಸಿಕೊಂಡಿದ್ದಾರೆ. ಪಿಐಎಲ್​ ಬಾಕಿ ಇದೆ. ನೀವು ಗೊತ್ತಾಗಬೇಕು ನಿಮಗೆ? ಅವರು ಭ್ರಷ್ಟ ವ್ಯಕ್ತಿ. ಈ ರೀತಿಯ ವ್ಯಕ್ತಿಗೆ ರಾಜ್ಯಪಾಲರಾಗಲು ಕೇಂದ್ರ ಏಕೆ ಅವಕಾಶ ನೀಡುತ್ತದೆ? ಚಾರ್ಜ್‌ಶೀಟ್ ತೆಗೆದುಕೊಂಡು ಅವರ ಹೆಸರು ಇದೆಯೋ ಇಲ್ಲವೋ ಎಂದು ನೋಡಿ ”ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು

ಮಮತಾ ಬ್ಯಾನರ್ಜಿರವರ ಈ ಮಾತಿಗೆ ಪ್ರತಿಕ್ರಿಯಿಸಿರೋ ರಾಜ್ಯಪಾಲರು, ಸಿಎಂ ಮಾತು ಕೇಳಿ ನನಗೆ ಶಾಕ್ ಆಗಿದೆ ಎಂದಿದ್ದಾರೆ. ಅಲ್ಲದೆ ತಮ್ಮ ವಿರುದ್ಧದ ಆರೋಪಗಳನ್ನ ತಳ್ಳಿಹಾಕಿದ್ದಾರೆ. ನನ್ನ ವಿರುದ್ಧ ಯಾವುದೇ ಚಾರ್ಜ್‌ಶೀಟ್ ಇಲ್ಲ. ಅಂತಹ ಯಾವುದೇ ದಾಖಲೆಗಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಇದೊಂದು ಸರಳವಾದ ಸುಳ್ಳು. ಇದು ತಪ್ಪು ಮಾಹಿತಿ. ಒಬ್ಬ ಪರಿಣತ ರಾಜಕಾರಣಿಯಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಧನಕರ್​ ಹೇಳಿದ್ದಾರೆ.

The post ಪಶ್ಚಿಮ ಬಂಗಾಳ ರಾಜ್ಯಪಾಲರನ್ನ’ದೊಡ್ಡ ಭ್ರಷ್ಟಾಚಾರಿ’ ಎಂದ ಸಿಎಂ ಮಮತಾ ಬ್ಯಾನರ್ಜಿ appeared first on News First Kannada.

Source: newsfirstlive.com

Source link