ಪಾಂಡವಪುರದಲ್ಲಿ ಇಂದಿನಿಂದ ಪುನೀತೋತ್ಸವ; ಸ್ಯಾಂಡಲ್​ವುಡ್ ನಟ-ನಟಿಯರು ಭಾಗಿ – Mandya Punithotsava in Pandavapura town from today Sandalwood actors and actresses participated mandya news in kannada


ಇಂದಿನಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಪುನೀತೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕನ್ನಡದ ಹಲವು ನಟ ಹಾಗೂ ನಟಿಯರು ಭಾಗಿಯಾಗಲಿದ್ದಾರೆ.

ಪಾಂಡವಪುರದಲ್ಲಿ ಇಂದಿನಿಂದ ಪುನೀತೋತ್ಸವ; ಸ್ಯಾಂಡಲ್​ವುಡ್ ನಟ-ನಟಿಯರು ಭಾಗಿ

ಪಾಂಡವಪುರದಲ್ಲಿ ಪುನೀತೋತ್ಸವ ಕಾರ್ಯಕ್ರಮ

ಮಂಡ್ಯ: ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿರುವ ಕ್ರೀಡಾಂಗಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪುನೀತೋತ್ಸವ (Puneethotsav) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಾ.ರಾಜ್ ಕುಮಾರ್ (Dr.Raj Kumar) ಅಪ್ಪಟ ಅಭಿಮಾನಿಯೂ ಆಗಿರುವ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್​​.ಪುಟ್ಟರಾಜು (MLA C.S.Puttaraju) ನೇತೃತ್ವದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಂಜೆ ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ (Sandalwood) ಹಲವು ನಟ ಮತ್ತು ನಟಿಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ (Arjun Janya), ಗಾಯಕ ವಿಜಯ ಪ್ರಕಾಶ್ (Vijay Prakash) ಹಾಗೂ ಗಾಯಕಿ ಅನನ್ಯ ಭಟ್ (Ananya Bhat) ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಸ್ಟಾರ್ ಹಾಸ್ಯ ನಟರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ.

ಪಾಂಡವಪುರ ಪಟ್ಟಣದಲ್ಲಿ ಮೂರು ದಿನ ನಡೆಯುವ ಈ ಅಪ್ಪು ಉತ್ಸವದಲ್ಲಿ ಪುನೀತ್ ರಾಜ್​ಕುಮಾರ್ (Dr. Puneeth Raj Kumar) ಅವರ ಫ್ಲೆಕ್ಸ್ ಹಾಗೂ ಬ್ಯಾನರ್​ಗಳು ರಾರಾಜಿಸುತ್ತಿವೆ. ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಶಾಸಕ ಪುಟ್ಟರಾಜು ಅವರು ಪಾಂಡವಪುರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

TV9 Kannada


Leave a Reply

Your email address will not be published.