ಪಾಂಡ್ಯಗೆ ಪರ್ಯಾಯ ಆಲ್​ರೌಂಡರ್: ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ಚಾಂಪಿಯನ್ ಆಟಗಾರ | Hardik’s back up, selectors include Raj Angad Bawa In India A Squad


Team India A Squad:ಸಂಜು ಸ್ಯಾಮ್ಸನ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಾಹರ್

ಪಾಂಡ್ಯಗೆ ಪರ್ಯಾಯ ಆಲ್​ರೌಂಡರ್: ಟೀಮ್ ಇಂಡಿಯಾಗೆ ಸಿಕ್ಕಿದ್ದಾನೆ ಚಾಂಪಿಯನ್ ಆಟಗಾರ

Raj Angad Bawa – Hardik Pandya

ಟೀಮ್ ಇಂಡಿಯಾ ಎಡಗೈ ಬ್ಯಾಟ್ಸ್​ಮನ್ ಆಲ್​ರೌಂಡರ್​ ಸಮಸ್ಯೆಯನ್ನು ಎದುರಿಸುತ್ತಿದೆ. ಅದರಲ್ಲೂ ಆಲ್​ರೌಂಡರ್​ಗಳ ವಿಷಯದಲ್ಲಿ ಟೀಮ್ ಇಂಡಿಯಾ ನೆಚ್ಚಿಕೊಂಡಿರುವುದು ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾರನ್ನು ಎಂಬುದೇ ಸತ್ಯ. ಇದೀಗ ಜಡೇಜಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಎಡಗೈ ಬ್ಯಾಟ್ಸ್​ಮನ್​​ನ ಸಮಸ್ಯೆ ಎದುರಾಗಿದೆ. ಇತ್ತ ಹಾರ್ದಿಕ್ ಪಾಂಡ್ಯ ಕೂಡ ಆಗಾಗ್ಗೆ ಫಿಟ್​ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಯುಗದಲ್ಲಿ ಪಾಂಡ್ಯರಂತಹ ಆಟಗಾರರು ಬಹುಶಃ ನಗಣ್ಯ. ಈ ವಿಚಾರ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್‌ಮೆಂಟ್‌ಗೆ ಗೊತ್ತಿರುವ ವಿಷಯ. ಹೀಗಾಗಿ ಇದೀಗ ಪಾಂಡ್ಯ ಅವರಂತಹ ಮತ್ತೊಬ್ಬ ಆಟಗಾರನ ಹುಡುಕಾಟವನ್ನು ಬಿಸಿಸಿಐ ತೀವ್ರಗೊಳಿಸಿದೆ.

ಈ ಹುಡುಕಾಟದಲ್ಲಿ ಸದ್ಯ ಸಿಕ್ಕಿರುವ ಯುವ ಆಟಗಾರನ ಹೆಸರೇ ರಾಜ್​ ಅಂಗದ್ ಬಾವ. ಪಂಜಾಬ್‌ನ ಭರವಸೆಯ ಯುವ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ-ಜಡೇಜಾ ಸ್ಥಾನವನ್ನು ತುಂಬಬಲ್ಲ ಆಟಗಾರ. ಏಕೆಂದರೆ ಬಲಗೈ ವೇಗಿಯಾಗಿರುವ ರಾಜ್ ಬಾವ, ಎಡಗೈ ಬ್ಯಾಟ್ಸ್​ಮನ್​. ಹೀಗಾಗಿ ಒಂದೇ ಆಯ್ಕೆಯಾಗುವ ಮೂಲಕ ಇಬ್ಬರಿಗೂ ಪರ್ಯಾಯ ಆಲ್​ರೌಂಡರ್​ನನ್ನು ರೂಪಿಸಿಕೊಳ್ಳುವತ್ತ ಆಯ್ಕೆ ಸಮಿತಿ ದಿಟ್ಟ ಹೆಜ್ಜೆಯಿಟ್ಟಿದೆ. ಅದರ ಮೊದಲ ಹೆಜ್ಜೆಯೇ ಸೆಪ್ಟೆಂಬರ್ 22 ರಿಂದ ನ್ಯೂಜಿಲೆಂಡ್ ಎ ವಿರುದ್ಧ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ರಾಜ್ ಅಂಗದ್ ಬಾವಗೆ ಚಾನ್ಸ್ ನೀಡಿರುವುದು.

ಅಂಡರ್-19 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ರಾಜ್ ಅಂಗದ್ ಬಾವಗೆ ಇದೀಗ ಟೀಮ್ ಇಂಡಿಯಾ ಎ ತಂಡದಲ್ಲಿ ಅವಕಾಶ ಸಿಕ್ಕಿದೆ. ಹೀಗೆ ಅವಕಾಶ ಸಿಗಲು ಮುಖ್ಯ ಕಾರಣ ಯುವ ಆಲ್​ರೌಂಡರ್​ನ ಪ್ರದರ್ಶನ ಮತ್ತು ವಿಶೇಷ ಸಾಮರ್ಥ್ಯ. ಅಂದರೆ ಲೈನ್ ಅ್ಯಂಡ್​ ಲೆಂಗ್ತ್​ನಲ್ಲಿ ಅತ್ಯುತ್ತವಾಗಿ ಬೌಲಿಂಗ್ ಮಾಡುವ ಅಂಗದ್, ಸ್ಫೋಟಕ ಎಡಗೈ ಬ್ಯಾಟ್ಸ್​ಮನ್ ಕೂಡ ಹೌದು.

ಕಿರಿಯರ ವಿಶ್ವಕಪ್​ನಲ್ಲಿ ರಾಜ್ ಅಂಗದ್ 6 ಪಂದ್ಯಗಳಲ್ಲಿ 63ರ ಸರಾಸರಿಯಲ್ಲಿ 252 ರನ್ ಕಲೆಹಾಕಿದ್ದರು. ಈ ವೇಳೆ ಒಂದು ಶತಕ ಕೂಡ ಸಿಡಿಸಿದ್ದರು. ಇನ್ನು ಬೌಲಿಂಗ್​​ನಲ್ಲಿ 6 ಪಂದ್ಯಗಳಿಂದ 9 ವಿಕೆಟ್ ಕಬಳಿಸಿ ಮಿಂಚಿದ್ದರು. ಅಂದರೆ ಇಲ್ಲಿ ಹಾರ್ದಿಕ್ ಪಾಂಡ್ಯ ಗಾಯಾಳುವಾದರೆ ಬಲಗೈ ವೇಗದ ಆಲ್​ರೌಂಡರ್​ ಆಗಿ ರಾಜ್ ಅಂಗದ್ ಬಾವರನ್ನು ಬಳಸಿಕೊಳ್ಳಬಹುದು.

ಒಂದು ವೇಳೆ ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದರೆ ಎಡಗೈ ಬ್ಯಾಟ್ಸ್​ಮನ್ ಆಲ್​ರೌಂಡರ್​ ಆಗಿ ಯುವ ಆಟಗಾರನನ್ನು ಬಳಸಿಕೊಳ್ಳಬಹುದಾಗಿದೆ. ಇದೇ ಪ್ಲ್ಯಾನ್​ನೊಂದಿಗೆ ಆಯ್ಕೆ ಸಮಿತಿ ರಾಜ್ ಅಂಗದ್ ಬಾವರನ್ನು ಹೊಸ ಆಲ್​ರೌಂಡರ್​ ಆಗಿ ರೂಪಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಅದರಂತೆ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಸರಣಿಯಲ್ಲಿ ಹಿರಿಯ ಆಟಗಾರರೊಂದಿಗೆ ಯುವ ಆಲ್​ರೌಂಡರ್ ರಾಜ್ ಅಂಗದ್ ಬಾವ ಆಯ್ಕೆಯಾಗಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ರಾಜ್ ಅಂಗದ್ ಚಂಡೀಗಢ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಈ ವೇಳೆ 2 ಪಂದ್ಯಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 152 ರನ್ ಗಳಿಸಿದ್ದಾರೆ.

ಇದಲ್ಲದೇ 3 ವಿಕೆಟ್‌ಗಳನ್ನು ಕೂಡ ಕಬಳಿಸಿದ್ದಾರೆ. ಅಂದರೆ ಸಿಕ್ಕ ಅವಕಾಶದಲ್ಲಿ ರಾಜ್ ಅಂಗದ್ ಬಾವ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದು, ಹೀಗಾಗಿ ಟೀಮ್ ಇಂಡಿಯಾದಲ್ಲಿರುವ ಆಲ್​ರೌಂಡರ್​ಗಳಿಗೆ ಪರ್ಯಾಯವಾಗಿ ಹೊಸ ಆಟಗಾರನನ್ನು ರೂಪಿಸಲು ಬಿಸಿಸಿಐ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ರಾಜ್ ಅಂಗದ್ ಬಾವ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಟೀಮ್ ಇಂಡಿಯಾ ಎ ತಂಡ ಹೀಗಿದೆ:

ಸಂಜು ಸ್ಯಾಮ್ಸನ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಾಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ ಮತ್ತು ರಾಜ್ ಅಂಗದ್ ಬಾವ.

ತಾಜಾ ಸುದ್ದಿ

TV9 Kannada


Leave a Reply

Your email address will not be published.