ಪಾಂಡ್ಯ ವಿರುದ್ಧ ಬಿಸಿಸಿಐ ಅಸಮಾಧಾನ -ಶೀಘ್ರದಲ್ಲೇ NCAಗೆ ತೆರಳಲಿರುವ ಆಲ್​ರೌಂಡರ್​

ಟೀಮ್ ಇಂಡಿಯಾ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಮಾಡೋದು ಕಷ್ಟ ಅನಿಸ್ತಿದೆ. ನ್ಯೂಜಿಲೆಂಡ್ T20 ಸರಣಿಯಿಂದ ಡ್ರಾಪ್​ ಔಟ್ ಆಗಿರುವ ಪಾಂಡ್ಯ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಡೌಟ್ ಎನ್ನಲಾಗ್ತಿದೆ. ಹಾಗಾದ್ರೆ ಪಾಂಡ್ಯ ಬಿಗ್​ಬಾಸ್​ಗಳ ಕೆಂಗಣ್ಣಿಗೆ ಗುರಿಯಾದ್ರಾ..? ನೋಡೋಣ ಈ ಸ್ಪೆಷಲ್ ರಿಪೋರ್ಟ್​​ನಲ್ಲಿ.

ಅನ್​​​ ಫಿಟ್​.. ಬ್ಯಾಡ್ ಫಾರ್ಮ್. ಇವೇ ಹಾರ್ದಿಕ್​​ ಪಾಂಡ್ಯಗೆ ಮುಳುವಾಗಿರೋದು. T20 ವಿಶ್ವಕಪ್​​ ಟೂರ್ನಿಗೆ ಆಯ್ಕೆಯಾದ ಪಾಂಡ್ಯ, ಬಿಗ್​​ಬಾಸ್​ಗಳ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿಲ್ಲ. ಹಾಗಾಗಿ ಟೀಮ್ ಇಂಡಿಯಾದ ಈ ಸ್ಟಾರ್ ಆಟಲ್​ರೌಂಡರ್, ನ್ಯೂಜಿಲೆಂಡ್​​ ಸರಣಿಗೆ ಡ್ರಾಪ್​​ ಔಟ್ ಆದ್ರು. ಇದೀಗ ನೋ ಕಾಂಪ್ರಮೈಸ್​​​​​​ ಅಂತಿರೋ ಬಿಸಿಸಿಐ, ಪಾಂಡ್ಯಗೆ ಫಿಟ್ನೆಸ್​​​ ಪ್ರೂವ್ ಮಾಡಲು ಸೂಚನೆ ನೀಡಿದೆ.

ಹಾರ್ದಿಕ್ ಪಾಂಡ್ಯ ವಿರುದ್ಧ ಬಿಸಿಸಿಐ ಅಸಮಾಧಾನ

ಕಳೆದ ಆರು ತಿಂಗಳಿಂದ ಹಾರ್ದಿಕ್, ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. T20 ವಿಶ್ವಕಪ್​​ನಲ್ಲಿ ಪಾಂಡ್ಯ ಕೆಲವೇ ಓವರ್​ಗಳನ್ನ ಬೌಲ್ ಮಾಡಿದ್ರೂ, 100% ಫಿಟ್​​ ಇರಲಿಲ್ಲ. ಹೀಗಾಗಿ ಬಿಸಿಸಿಐ ಪಾಂಡ್ಯಗೆ ಎನ್​​ಸಿಎಗೆ ತೆರಳಿ, ಫಿಟ್ನೆಸ್ ಪ್ರೂವ್ ಮಾಡಲು ಸೂಚಿಸಿದೆ. ಪಾಂಡ್ಯ ಫಿಟ್ ಆದ್ರೆ ಮಾತ್ರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ, ಆಯ್ಕೆ ಮಾಡಲಾಗುತ್ತದೆ. ಹಾಗೆ ಡಿಸೆಂಬರ್​ನಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸದಂತೆ, ಪಾಂಡ್ಯಗೆ ಸಲಹೆ ನೀಡಲಾಗಿದೆ.

ಮತ್ತೊಂದೆಡೆ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ, ಪಾಂಡ್ಯ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳದಿರಲು ತೀರ್ಮಾನಿಸಿದೆ. ಸದ್ಯ ಟೀಮ್ ಇಂಡಿಯಾದ ಶ್ರೇಷ್ಠ ಆಲ್​ರೌಂಡರ್​ ಎನಿಸಿಕೊಂಡಿರೋ ಪಾಂಡ್ಯಗೆ, ಮತ್ತೊಂದು ಚಾನ್ಸ್​ ನೀಡಲು ಮಂಡಳಿ ತೀರ್ಮಾನಿಸಿದೆ. ಹಾಗಾಗಿ ಪಾಂಡ್ಯಗೆ ಶೀಘ್ರದಲ್ಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚಿಸಿದೆ.

ಪಾಂಡ್ಯಗೆ ಟೈಮ್ ಬೇಕು..!

‘ಸದ್ಯ ಹಾರ್ದಿಕ್ ಪಾಂಡ್ಯ, ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಫಿಟ್ನೆಸ್ ಹೊಂದಿಲ್ಲ. ಪಾಂಡ್ಯ ಚೇತರಿಸಿಕೊಳ್ಳಲು ಇನ್ನೂ ಕಾಲಾವಕಾಶ ಬೇಕಿದೆ. ಪಾಂಡ್ಯರನ್ನ ತರಾತುರಿಯಲ್ಲಿ ತಂಡಕ್ಕೆ ಆಯ್ಕೆ ಮಾಡೋದು ನಮಗೆ ಇಷ್ಟವಿಲ್ಲ. ಪಾಂಡ್ಯ ಫಿಟ್ ಆದ್ರೆ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಮತ್ತು T20 ಸರಣಿಗೆ, ಆಯ್ಕೆ ಮಾಡಲಾಗುತ್ತದೆ’

-ಬಿಸಿಸಿಐ

ಒಟ್ಟಿನಲ್ಲಿ T20 ವಿಶ್ವಕಪ್​ಗೆ ಅನ್​ಫಿಟ್ ಹಾರ್ದಿಕ್ ಪಾಂಡ್ಯರನ್ನ ಆಯ್ಕೆ ಮಾಡಿ ಟೀಕೆಗೆ ಒಳಗಾಗಿದ್ದ ಬಿಸಿಸಿಐ, ಇದೀಗ ಎಚ್ಚರಿಕೆಯ ಹೆಜ್ಜೆಯನ್ನಿಡಲು ತೀರ್ಮಾನಿಸಿದೆ. ಹೀಗಾಗಿ ಸ್ಟಾರ್ ಆಲ್​ರೌಂಡರ್ ಪಾಂಡ್ಯ ಫಿಟ್ನೆಸ್​​​ ವಿಚಾರದಲ್ಲಿ, ಗಂಭೀರ ನಿರ್ಣಯ ತೆಗೆದುಕೊಳ್ಳಲು ತೀರ್ಮಾನಿಸಿದೆ.

News First Live Kannada

Leave a comment

Your email address will not be published. Required fields are marked *