ಪಾಕಿಸ್ತಾನದ ಫುಟ್ಬಾಲ್ ಕ್ರೀಡಾಂಗಣದ ಬಳಿ ಬಾಂಬ್ ಸ್ಫೋಟ! ಪಂದ್ಯ ನಡೆಯುತ್ತಿರುವಾಗಲೇ ಸಂಭವಿಸಿದ ದುರ್ಘಟನೆ | Bomb blast outside stadium in Pakistan players survived 3 injured


Breaking news: ಪಾಕಿಸ್ತಾನದ ಫುಟ್ಬಾಲ್ ಕ್ರೀಡಾಂಗಣದ ಹೊರಗೆ ಬಾಂಬ್ ಸ್ಫೋಟಗೊಂಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ.

ಪಾಕಿಸ್ತಾನದ ಫುಟ್ಬಾಲ್ ಕ್ರೀಡಾಂಗಣದ (football stadium) ಹೊರಗೆ ಬಾಂಬ್ ಸ್ಫೋಟಗೊಂಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ (bomb exploded). ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಪ್ರಕಾರ, ಪಂದ್ಯವನ್ನು ದಕ್ಷಿಣದ ಅರೆಸೈನಿಕ ಪಡೆ ಫ್ರಾಂಟಿಯರ್ ಕಾರ್ಪ್ಸ್ ಆಯೋಜಿಸಿತ್ತು. ಆಯೋಜಕರ ಪ್ರಕಾರ, ಸ್ಫೋಟದಲ್ಲಿ ಯಾವುದೇ ಆಟಗಾರನಿಗೆ ಗಾಯವಾಗಿಲ್ಲ. ಆದರೆ, ಘಟನೆಯಲ್ಲಿ ಓರ್ವ ಪೊಲೀಸ್ ಸೇರಿದಂತೆ 3 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಫುಟ್ಬಾಲ್ ಕ್ರೀಡಾಂಗಣದ ಹೊರಗೆ ಶನಿವಾರ ಬಾಂಬ್ ದಾಳಿ ನಡೆದಿದೆ.

ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಸ್ಪೋಟದಿಂದಾಗಿ ಸುತ್ತಮುತ್ತಲೆಲ್ಲಾ ಭೀತಿ ಆವರಿಸಿದೆ. ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ಹಾಗೂ ಆಟಗಾರರು ಭಯಭೀತರಾಗಿದ್ದರು. ಘಟನೆಯ ನಂತರ ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ಮೂವರಲ್ಲಿ ಕ್ರೀಡಾಂಗಣದ ಗೇಟ್‌ನಲ್ಲಿದ್ದ ಒಬ್ಬ ಪೊಲೀಸ್ ಸಹ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನಕ್ಕೂ ಮುನ್ನ ಅಫ್ಘಾನಿಸ್ತಾನದಲ್ಲೂ ಸ್ಫೋಟ

ಮೂರು ದಿನಗಳ ಹಿಂದೆ ಕಾಬೂಲ್‌ನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಶಪಗಿಜಾ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಇದೇ ರೀತಿಯ ಬಾಂಬ್ ಸ್ಫೋಟದ ಸುದ್ದಿ ಬಂದಿತ್ತು. ಅಫ್ಘಾನಿಸ್ತಾನದ ಮಾಧ್ಯಮಗಳ ವರದಿಯ ಪ್ರಕಾರ, ಒಬ್ಬ ಭಯೋತ್ಪಾದಕ ಅಲ್ಲಿ ನೆರೆದಿದ್ದ ಸಭಿಕರ ಜೊತೆ ಸೇರಿಕೊಂಡು, ತಾನು ಕಟ್ಟಿಕೊಂಡಿದ್ದ ಬಾಂಬ್‌ನಿಂದ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಇದು ಕಾಲ್ತುಳಿತಕ್ಕೆ ಕಾರಣವಾಯಿತು. ಅಪಘಾತ ಸಂಭವಿಸಿದಾಗ ಆ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರರ ಉಪಸ್ಥಿತಿಯೂ ಕ್ರೀಡಾಂಗಣದಲ್ಲಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *