ಪಾಕಿಸ್ತಾನದ ಮೂವರು ಸ್ಮಗ್ಲರ್​​ಗಳನ್ನು ಹೊಡೆದುರುಳಿಸಿದ ಬಿಎಸ್​ಎಫ್ ಯೋಧರು; 36 ಕೆಜಿ ಹೆರಾಯಿನ್​ ವಶ | BSF neutralizes three Pak smugglers in Samba Sector of Jammu


ಪಾಕಿಸ್ತಾನದ ಮೂವರು ಸ್ಮಗ್ಲರ್​​ಗಳನ್ನು ಹೊಡೆದುರುಳಿಸಿದ ಬಿಎಸ್​ಎಫ್ ಯೋಧರು; 36 ಕೆಜಿ ಹೆರಾಯಿನ್​ ವಶ

ಪ್ರಾತಿನಿಧಿಕ ಚಿತ್ರ

ದೆಹಲಿ: ಇಂದು ಜಮ್ಮುವಿನಲ್ಲಿ ಪಾಕಿಸ್ತಾನದ ಮೂವರು ಸ್ಮಗ್ಲರ್​ಗಳನ್ನು (Pakistani Smugglers) ಗಡಿ ಭದ್ರತಾ ಪಡೆ ಯೋಧರು (BSF) ಹೊಡೆದುರುಳಿಸಿದ್ದಾರೆ. ಹಾಗೇ, ಮೃತ ಸ್ಮಗ್ಲರ್​ಗಳಿಂದ 36 ಪ್ಯಾಕೆಟ್​ಗಳಷ್ಟು ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಇವರ ಸಂಬಾ ಅಂತಾರಾಷ್ಟ್ರೀಯ ಗಡಿಯ ಮೂಲಕ ಡ್ರಗ್ಸ್​ನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್​ಎಫ್​ ತಿಳಿಸಿದೆ. ಪ್ಯಾಕೆಟ್​​ನಲ್ಲಿ ಇರುವುದು ಹೆರಾಯಿನ್​. ಅಂದಾಜು 36 ಕೆಜಿಗಳಷ್ಟನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಬಿಎಸ್​​ಎಫ್​​ನ ಡಿಐಜಿ ಸಂಧು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published.