ಸುದ್ದಿಗೋಷ್ಠಿಯಲ್ಲಿ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವಚಂದ್ರ
ದೆಹಲಿ: ಭಾರತ ವಿರೋಧಿ ತಪ್ಪು ಮಾಹಿತಿ ಹರಡುತ್ತಿರುವ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 35 ಯೂಟ್ಯೂಬ್ ಚಾನೆಲ್ಗಳು, ಎರಡು ವೆಬ್ಸೈಟ್ಗಳು, ಎರಡು ಟ್ವಿಟರ್ ಖಾತೆಗಳು, ಎರಡು ಇನ್ಸ್ಟಾಗ್ರಾಮ್ ಖಾತೆಗಳು ಮತ್ತು ಒಂದು ಫೇಸ್ಬುಕ್ ಖಾತೆಯನ್ನು ನಿಷೇಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಗುರುವಾರ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. ಅಧಿಕಾರಿಗಳು ಯೂಟ್ಯೂಬ್ ಸೇರಿದಂತೆ ಹಲವು ಚಾನಲ್ಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯಲ್ಲಿದ್ದಾರೆ, ಇದು ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಇದನ್ನು “ದೇಶದ ವಿರುದ್ಧ ತಪ್ಪು ಮಾಹಿತಿಯ ಯುದ್ಧ” ಎಂದು ಕರೆದ ಚಂದ್ರ ಅವರು ಇತ್ತೀಚಿನ ಚಾನಲ್ಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು. ಡಿಸೆಂಬರ್ 2021 ರಲ್ಲಿ 20 ಚಾನೆಲ್ ಅನ್ನು ನಿರ್ಬಂಧಿಸಲಾಗಿದೆ. ಅಲ್ಲಿನ ವಿಷಯವು ದೇಶದ ಸಾರ್ವಭೌಮತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಡಿಸೆಂಬರ್ನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಹೇಳಿಕೊಳ್ಳುವುದು ಮತ್ತು ಉತ್ತರ ಕೊರಿಯಾದ ಸೇನೆಯು ಲಡಾಖ್ ತಲುಪಿದೆ ಎಂಬ ವಿಷಯಗಳುಳ್ಳ ಕೆಲವು ಚಾನೆಲ್ಗಳ ವಿಡಿಯೊಗಳನ್ನು ಸಚಿವಾಲಯವು ಸುದ್ದಿಗೋಷ್ಠಿಯಲ್ಲಿ ಪ್ರಸಾರ ಮಾಡಿದೆ.
ಈ ಚಾನೆಲ್ಗಳು ಒಟ್ಟು 1.2 ಕೋಟಿ ಸಬ್ಸ್ಕ್ರೈಬರ್ ಬೇಸ್ ಮತ್ತು 130 ವೀಕ್ಷಣೆಗಳನ್ನು ಹೊಂದಿದ್ದವು ಎಂದು ಚಂದ್ರ ಹೇಳಿದರು. ಗುರುವಾರವೇ ಗುಪ್ತಚರ ಸಂಸ್ಥೆಗಳಿಂದ ಸಚಿವಾಲಯವು ಮಾಹಿತಿ ಪಡೆದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು. ಐಟಿ ಕಾಯ್ದೆಯಡಿ ಅಧಿಕೃತ ಅಧಿಕಾರಿಯಾಗಿರುವ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್, ನಿರ್ಬಂಧಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ, ಭಾರತದ ವಿದೇಶಿ ಸಂಬಂಧಗಳು, ಜನರಲ್ ರಾವತ್ ಅವರ ಸಾವು, ಪ್ರತ್ಯೇಕತಾವಾದಿ ಸಿದ್ಧಾಂತ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕೇಂದ್ರೀಕರಿಸಿ ಚಾನೆಲ್ಗಳು “ಭಾರತ ವಿರೋಧಿ” ವಿಷಯವನ್ನು ಪ್ರಸಾರ ಮಾಡುತ್ತವೆ, ಇದು ಸೆಕ್ಷನ್ 69 ರ-ಎ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಅಡಿಯಲ್ಲಿ ನಿರ್ಬಂಧಿಸಲ್ಪಟ್ಟಿವೆ ಎಂದು ಸಹಾಯ್ ಹೇಳಿದ್ದಾರೆ.
ನಿರ್ಬಂಧಿತ ಚಾನೆಲ್ಗಳಲ್ಲಿ ‘ಖಬರ್ ವಿತ್ ಫ್ಯಾಕ್ಟ್ಸ್’, ‘ಗ್ಲೋಬಲ್ ಟ್ರುತ್’, ‘ಇನ್ಫರ್ಮೇಷನ್ ಹಬ್’, ‘ಅಪ್ನಿ ದುನಿಯಾ ಟಿವಿ’ ಮತ್ತು ‘ಖೋಜಿ ಟಿವಿ’ ಸೇರಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ನಿರ್ಬಂಧಿಸಲಾದ ಸೈಟ್ಗಳು ವೈಟ್ ನ್ಯೂಸ್ ಮತ್ತು ಡಿ ನೌ ಆಗಿದ್ದು ಅದರ ಯುಟ್ಯೂಬ್ ಚಾನಲ್ಗಳನ್ನು ಸಹ ನಿರ್ಬಂಧಿಸಲಾಗಿದೆ.
“ಸಚಿವಾಲಯದಿಂದ ನಿರ್ಬಂಧಿಸಲಾದ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು ನಾಲ್ಕು ಸಂಘಟಿತ ತಪ್ಪು ಮಾಹಿತಿ ನೆಟ್ವರ್ಕ್ಗಳ ಭಾಗವೆಂದು ಗುರುತಿಸಲಾಗಿದೆ. ಇವುಗಳಲ್ಲಿ ಅಪ್ನಿ ದುನಿಯಾ ನೆಟ್ವರ್ಕ್ 14 ಯೂಟ್ಯೂಬ್ ಚಾನೆಲ್ಗಳನ್ನು ನಿರ್ವಹಿಸುತ್ತಿದೆ ಮತ್ತು ತಲ್ಹಾ ಫಿಲ್ಮ್ಸ್ ನೆಟ್ವರ್ಕ್ 13 ಯೂಟ್ಯೂಬ್ ಚಾನೆಲ್ಗಳನ್ನು ನಿರ್ವಹಿಸುತ್ತಿದೆ. ನಾಲ್ಕು ಚಾನೆಲ್ಗಳ ಒಂದು ಸೆಟ್ ಮತ್ತು ಇತರ ಎರಡು ಚಾನೆಲ್ಗಳ ಸೆಟ್ಗಳು ಪರಸ್ಪರ ಸಿಂಕ್ರೊನೈಸೇಶನ್ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಅಂತಹ ಚಾನೆಲ್ಗಳ ವಿರುದ್ಧ ಮಧ್ಯವರ್ತಿಗಳು ಮತ್ತು ಸಾರ್ವಜನಿಕರು ಕಾರ್ಯನಿರ್ವಹಿಸುವಂತೆ ಚಂದ್ರ ಕರೆ ನೀಡಿದ್ದು ಸಚಿವಾಲಯವು ಈ ಕಾರ್ಯವನ್ನು ಮುಂದುವರಿಸುತ್ತದೆ ಎಂದು ಹೇಳಿದರು.