ಲಾಹೋರ್: ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿತ ಕಂಡಿದ್ದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಆರ್ಥಿಕತೆಯನ್ನು ಸರಿದೂಗಿಸಲು ಪೆಟ್ರೋಲ್ ಡೀಸೆಲ್​ ಬೆಲೆಯನ್ನ ಏರಿಕೆ ಮಾಡಿದೆ. ಪೆಟ್ರೋಲ್​ ಬೆಲೆಯನ್ನ ಲೀಟರ್​ಗೆ 5.40 ರೂ. ಏರಿಕೆ ಮಾಡಿದ್ರೆ ಹೈಸ್ಪೀಡ್ ಡೀಸೆಲ್ ಬೆಲೆಯನ್ನ ₹2.54 ರೂಪಾಯಿಗೆ ಏರಿಸಲಾಗಿದೆ. ಸದ್ಯ ಪಾಕ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 118.09 ರೂ.ಆಗಿದ್ದರೆ ಡೀಸೆಲ್ ಬೆಲೆ 116.5 ರೂ. ಆಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರವಲ್ಲದೇ ಕೆರೋಸಿನ್ ಮತ್ತು ಲೈಟ್ ಡೀಸೆಲ್ ಆಯಿಲ್ ಬೆಲೆಯನ್ನೂ ಏರಿಸಲಾಗಿದೆ. ಕೆರೋಸಿನ್ ಬೆಲೆಯನ್ನ 1.39 ಪೈಸೆ ಏರಿಕೆ ಮಾಡಿದ್ದು ಲೈಟ್ ಡೀಸೆಲ್ ಆಯಿಲ್ ಬೆಲೆಯನ್ನ 1.27 ರೂ. ಏರಿಸಲಾಗಿದೆ. ಸದ್ಯ ಕೆರೋಸಿನ್ ಬೆಲೆ 87.14 ರೂ. ಆಗಿದ್ದು ಲೈಟ್ ಡೀಸೆಲ್ ಆಯಿಲ್ ಬೆಲೆ 84.67 ರೂಪಾಯಿಗಳಾಗಿವೆ. .

ಬೆಲೆ ಏರಿಕೆಯ ಬಗ್ಗೆ ಇಮ್ರಾನ್​ಖಾನ್​ರ ವಿಶೇಷ ಸಹಾಯಕ ಶಾಹ್​ಬಾಜ್ ಗಿಲ್ ಘೋಷಣೆ ಮಾಡಿದ್ದು ಆಯಿಲ್ ಅಂಡ್ ಗ್ಯಾಸ್ ರೆಗ್ಯುಲೇಟರಿ ಅಥಾರಿಟಿ ಪ್ರಕಾರ ಬೆಲೆ ಏರಿಕೆ ಮಾಡದೇ ಸರ್ಕಾರ ದೊಡ್ಡ ರಿಲೀಫ್ ಕೊಟ್ಟಿದೆ ಎಂದಿದ್ದಾರೆ. ಆಯಿಲ್ ಅಂಡ್ ಗ್ಯಾಸ್ ರೆಗ್ಯುಲೇಟರಿ ಅಥಾರಿಟಿ ಲೀಟರ್ ಪೆಟ್ರೋಲ್ ಬೆಲೆಯನ್ನ 11.4 ಏರಿಕೆ ಮಾಡಲು ಹೇಳಿತ್ತು ಎಂದು ಶಾಹ್​ಬಾಜ್ ಗಿಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಇತ್ತ ಪಾಕ್​ನ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಹೇಳಿಕೆ ನೀಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದ್ದರಿಂದ ಬೆಲೆ ಏರಿಕೆ ಮಾಡದೇ ಬೇರೆ ಆಯ್ಕೆಯೇ ಇರಲಿಲ್ಲ ಎಂದಿದ್ದಾರೆ. ಕಳೆದ 15 ದಿನಗಳಲ್ಲಿ ಪಾಕ್​ನಲ್ಲಿ ಎರಡು ಬಾರಿ ಇಂಧನ ಬೆಲೆ ಏರಿಸಲಾಗಿದೆ ಎಂಬ ಮಾಹಿತಿ ಇದೆ.

The post ಪಾಕ್​ನಲ್ಲಿ ಗಗನಕ್ಕೇರಿದ ತೈಲ ಬೆಲೆ; ಪ್ರತಿ ಲೀಟರ್​ ಪೆಟ್ರೋಲ್​ಗೆ 118 ರೂ. ಬೆಲೆ appeared first on News First Kannada.

Source: newsfirstlive.com

Source link