ಪಾಕಿಸ್ತಾನದ ಮುಲ್ತಾನ್ ಬಳಿ ಹೈವೇ ಒಂದರಲ್ಲಿ ವೇಗವಾಗಿ ತೆರಳುತ್ತಿದ್ದ ಬಸ್ ಕಂಟೇನರ್ ಟ್ರಕ್​ಗೆ ಡಿಕ್ಕಿಹೊಡೆದ ಪರಿಣಾಮ ಬಸ್ ಚಾಲಕ ಸೇರಿ 33 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರಂತ ಸಂಭವಿಸಿದೆ.

ಪೂರ್ವ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್​ಗೆ ಬಸ್​ ತೆರಳುತ್ತಿತ್ತು ಎನ್ನಲಾಗಿದ್ದು ಬಸ್​​ನಲ್ಲಿದ್ದವರೆಲ್ಲರೂ ಈದ್ ಅಲ್ ಅಧಾ ಆಚರಿಸಲು ತಮ್ಮ ಊರಿಗೆ ಹೊರಟಿದ್ದರು ಎಂದು ಹೇಳಲಾಗಿದೆ. ಬಸ್​ ಮತ್ತು ಟ್ರಕ್ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದರ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ.

ಅಪಘಾತ ಸಂಭವಿಸಿದ ಸಮಯದಲ್ಲಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಸ್​ನಲ್ಲಿ ಸಿಲುಕಿದ್ದವರನ್ನ ಹೊರಗೆಳೆದು ಹಲವು ಪ್ರಾಣ ಉಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪಾಕ್​ನ ಮಾಹಿತಿ ಸಚಿವ ಫವಾದ್ ಚೌಧರಿ ಸಂತಾಪ ಸೂಚಿಸಿದ್ದಾರೆ..

The post ಪಾಕ್​ನಲ್ಲಿ ಭೀಕರ ಬಸ್ ಅಪಘಾತ; ಈದ್ ಆಚರಣೆಗೆ ಊರಿಗೆ ಹೊರಟಿದ್ದ 33 ಮಂದಿ ದುರ್ಮರಣ appeared first on News First Kannada.

Source: newsfirstlive.com

Source link