ನವದೆಹಲಿ: ಪಾಕಿಸ್ತಾನವು ಸಕ್ಕರೆ ಸಂಕಷ್ಟದಲ್ಲಿ ಸಿಲುಕಿದೆ. ಒಂದು ಕೆಜಿ ಸಕ್ಕರೆ ಬೆಲೆ ಬರೋಬ್ಬರಿ 150 ರೂಪಾಯಿ ತಲುಪಿದೆ.
ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಕೊಡಿಸಲು ಪಾಕಿಸ್ತಾನ ಇನ್ನಿಲ್ಲದ ತಂತ್ರಗಳನ್ನು ಅನುಸರಿಸುತ್ತಿದೆ. ಈ ಬೆನ್ನಲ್ಲೇ ಪಾಕಿಸ್ತಾನಕ್ಕೆ ಸಂಕಷ್ಟವೊಂದು ಎದುರಾಗಿದ್ದು ಸಕ್ಕರೆ ಬೆಲೆ ತೀವ್ರ ಹೆಚ್ಚಳವಾಗಿದ್ದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ.
ಈಗ ಅಲ್ಲಿ ಒಂದು ಕೆ.ಜಿ ಸಕ್ಕರೆಗೆ ಹೋಲ್ಸೇಲ್ ಬೆಲೆ 140 ರೂಪಾಯಿ ಇದ್ದರೆ, ರಿಟೇಲ್ ಬೆಲೆ 150 ರೂಪಾಯಿ ಇದೆ. ಕೆಲವೊಂದು ನಗರಗಳಲ್ಲಿ ಸಕ್ಕರೆ ಬೆಲೆ ವಿಭಿನ್ನವಾಗಿದೆ. ಪೇಶಾವರ ಮಾರುಕಟ್ಟೆಯಲ್ಲಿ ನಿನ್ನೆ 8 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಸಕ್ಕರೆಗೆ 140 ರೂಪಾಯಿ ಇದೆ. ಅಕ್ಬರಿ ಮಂಡಿಯಲ್ಲಿ 140 ರೂಪಾಯಿ ಇದ್ದರೆ, ಕರಾಚಿಯಲ್ಲಿ ಕೆಜಿಗೆ 142 ರೂಪಾಯಿ ಇದೆ.