ಪಾಕ್​​ನಲ್ಲಿ 2025 ಚಾಂಪಿಯನ್​ ಟ್ರೋಫಿ; ಭಾಗವಹಿಸುತ್ತಾ ಟೀಂ ಇಂಡಿಯಾ?


2024 ರಿಂದ 2031ರವರೆಗಿನ ಪ್ರಮುಖ ಟೂರ್ನಮೆಂಟ್​ಗಳ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಈ ಪೈಕಿ 2025ರ ಚಾಂಪಿಯನ್​ ಟ್ರೋಫಿ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿದೆ. ಆದರೆ ಭಾರತ-ಪಾಕಿಸ್ತಾನ ನಡುವೆ ಸಂಬಂಧ ಸರಿಯಿಲ್ಲದ ಕಾರಣ ಚಾಂಪಿಯನ್​ ಟ್ರೋಫಿಯಲ್ಲಿ ಭಾಗವಹಿಸಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಈ ಸಂಬಂಧ ಮಾತಾಡಿದ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡಿದ್ದು, ಭಾರತ ತಂಡ, ಚಾಂಪಿಯನ್ಸ್ ಟ್ರೋಫಿಗೆ ನಮ್ಮ ದೇಶಕ್ಕೆ ಬರಲಿದೆ. ದೊಡ್ಡ ಟೂರ್ನಮೆಂಟ್ ​ಅನ್ನು ತ್ಯಜಿಸುವುದು ಸುಲಭದ ಮಾತಲ್ಲ ಎಂದಿದ್ದಾರೆ.

ಆತಿಥೇಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಮಂಡಳಿಗಳ ನಡುವಿನ ವೈಷಮ್ಯವನ್ನ ಐಸಿಸಿ ಪರಿಗಣಿಸುತ್ತದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ಭಾರತ ತಂಡ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ರಮೀಜ್ ತಿಳಿಸಿದ್ದಾರೆ.

The post ಪಾಕ್​​ನಲ್ಲಿ 2025 ಚಾಂಪಿಯನ್​ ಟ್ರೋಫಿ; ಭಾಗವಹಿಸುತ್ತಾ ಟೀಂ ಇಂಡಿಯಾ? appeared first on News First Kannada.

News First Live Kannada


Leave a Reply

Your email address will not be published. Required fields are marked *