ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲಿ ಆಲ್‌ರೌಂಡ್ ಆಟದ ಮೂಲಕ ಎಲ್ಲ ಪಂದ್ಯಗಳನ್ನ ಗೆದ್ದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಇಂದಿನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಸೆಮಿಫೈನಲ್‌ನಲ್ಲಿ ಪಾಕ್ಗೆ ಆಸ್ಟ್ರೇಲಿಯಾ ಸವಾಲ್ವೊಡ್ಡಲಿದೆ. ಆಸಿಸ್ ಅಗ್ರ ಕ್ರಮಾಂಕದಲ್ಲಿ ವಾರ್ನರ್, ಫಿಚ್, ಮಾರ್ಷ್ ಇದ್ದಾರೆ. ಬೌಲಿಂಗ್‌ನಲ್ಲಿ ಜಂಪಾ, ಸ್ಟಾರ್ಕ್, ಕಮಿನ್ಸ್ ಮಿಂಚುತ್ತಿದ್ದು, ಆಸಿಸ್ಗೆ ಪ್ಲಸ್ ಪಾಯಿಂಟ್.
ಇನ್ನು, ಆ್ಯರೋನ್ ಫಿಂಚ್ ಮತ್ತು ಮ್ಯಾಕ್ಸ್ವೆಲ್ ಭರವಸೆ ಮೂಡಿಸಿದ್ದಾರೆ. ಸೀರಿಸ್ನಲ್ಲಿ ನಾಲ್ಕು ಪಂದ್ಯ ಗೆದ್ದ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿತ್ತು. ಹ್ಯಾಟ್ರಿಕ್ ಸೇರಿದಂತೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದುಕೊಂಡಿಲ್ಲ. ಹಾಗಾಗಿ ಈ ಪ್ರಶಸ್ತಿ ಗೆಲ್ಲಲು ಪಣತೊಟ್ಟಿದೆ.
ಇನ್ನು, ಪಾಕಿಸ್ತಾನದ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿದೆ. ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭ ಒದಗಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹಫೀಜ್, ಫಕಾರ್ ಜಮಾನ್, ಶೋಯೆಬ್ ಮಲ್ಲಿಕ್ ಬಲ ತುಂಬಲಿದ್ದಾರೆ.