ಪಾಕ್​ ವಿರುದ್ಧ ಭರ್ಜರಿ ಜಯ; T20 ವಿಶ್ವಕಪ್​​ ಫೈನಲ್​​ಗೆ ಆಸ್ಟ್ರೇಲಿಯಾ​​


ಇಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​​​​​ ಸೆಮಿಫೈನಲ್-​​​2 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಪಾಕ್​​ ನೀಡಿದ ರನ್​​ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 19 ಓವರ್​​ನಲ್ಲಿ 5 ವಿಕೆಟ್​​ ನಷ್ಟಕ್ಕೆ 177 ರನ್​​​​ ಗಳಿಸಿ ಗೆದ್ದು ಬೀಗಿದೆ.

ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಪಾಕ್​​​ 4 ವಿಕೆಟ್​​ ನಷ್ಟಕ್ಕೆ 176 ರನ್​​ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ 177 ರನ್​​ಗಳ ಟಾರ್ಗೆಟ್​ ನೀಡಿತ್ತು. ಪಾಕ್​​​ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್​​ 67, ಬಾಬರ್​ ಅಜಂ 39, ಫಾಕರ್​​ ಜಮಾನ್​​ 55 ರನ್​​ ಗಳಿಸುವ ಮೂಲಕ ಉತ್ತಮ ಮೊತ್ತ ಪೇರಿಸಿದ್ದರು.

ಆಸ್ಟ್ರೇಲಿಯಾ ಪರ ಡೇವಿಡ್​​ ವಾರ್ನರ್​​ 49, ಮೆಚೆಲ್​​ ಮಾರ್ಷ್​​ 28, ಸ್ಟಾಯಿನಿಸ್​​ 40, ಮಾಥೀವ್​​ ವಾಡೆ 35 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಈ ಮೂಲಕ T20 ವಿಶ್ವಕಪ್​​ ಫೈನಲ್​​ಗೆ ಆಸ್ಟ್ರೇಲಿಯಾ​​ ಪ್ರವೇಶಿಸಿದೆ.

News First Live Kannada


Leave a Reply

Your email address will not be published. Required fields are marked *