ಬರೋಬ್ಬರಿ 24 ವರ್ಷಗಳ ಬಳಿಕ ಮುಂದಿನ ವರ್ಷ 2022ರ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ತಂಡ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ, ಮೂರು ಟೆಸ್ಟ್, ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಸರಣಿಗಾಗಿ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಎಲ್ಲಾ ತಯಾರಿ ಮಾಡಿಕೊಳ್ತಿದೆ.
ಸದ್ಯ ಆಸ್ಟ್ರೇಲಿಯಾ ಟಿ20 ವಿಶ್ವಕಪ್ನ ಸೆಮಿಫೈನಲ್ಗೇರಿದ್ದು, ನಾಳೆ ಪಾಕಿಸ್ತಾನವನ್ನ ಎದುರಿಸಲಿದೆ. ಈ ಪಂದ್ಯಕ್ಕಾಗಿ ಆಸಿಸ್ ಸಿದ್ಧತೆ ಮಾಡಿಕೊಂಡಿದ್ದು, ಫೈನಲ್ಗೇರುವ ಪಣ ತೊಟ್ಟಿದೆ. ಆದರೆ ಈ ನಡುವೆ ಮಾತನಾಡಿರುವ ಆಸಿಸ್ ತಂಡದ ಗ್ಲೇನ್ ಮ್ಯಾಕ್ಸ್ವೆಲ್, ಮುಂದಿನ ವರ್ಷ ಪಾಕ್ ಪ್ರವಾಸ ಕೈಗೊಳ್ತೀರಾ ಎಂಬ ಪ್ರಶ್ನೆಗೆ ವಿಭಿನ್ನ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
ಮಾರ್ಚ್-ಏಪ್ರಿಲ್ನಲ್ಲಿ ಶುರುವಾಗುವ ಪಾಕಿಸ್ತಾನ ಪ್ರವಾಸಕ್ಕೆ ಮ್ಯಾಕ್ಸ್ವೆಲ್ ಪ್ರಯಾಣ ಬೆಳೆಸುವುದು ಅನುಮಾನ. ಈ ಬಗ್ಗೆ ಮ್ಯಾಕ್ಸ್ವೆಲ್ ಲಭ್ಯತೆಯ ಬಗ್ಗೆ ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ನಿರ್ಧಾರ ನಾನು ಮದುವೆ ಆಗ್ತಿರೋ ಯುವತಿ ಮೇಲೆ ಮೇಲೆ ಎಂದು ಮ್ಯಾಕ್ಸ್ ಹೇಳಿದ್ದಾರೆ. ಏಕೆಂದರೆ ಆ ಸಂದರ್ಭದಲ್ಲಿ ಭಾರತ ಮೂಲದ ವಿನಿ ರಾಮನ್ ಅವರನ್ನು ಮ್ಯಾಕ್ಸ್ವೆಲ್ ವಿವಾಹವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇಬ್ಬರೂ ಕೂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಮ್ಯಾಕ್ಸ್ವೆಲ್ ಈ ಕಾರಣದಿಂದಾಗಿ, ನನ್ನ ಫಿಯಾನ್ಸಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ, ನಾನು ಪ್ರವಾಸಕ್ಕೆ ಕೈಗೊಳ್ಳುವುದು ನಿರ್ಧಾರವಾಗುತ್ತೆ ಎಂದು ಹೇಳಿದ್ದಾರೆ.