ಇಸ್ಲಾಮಾಬಾದ್: ಜಗತ್ತಿನಾದ್ಯಂತ ಜನ ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿದ್ದರೆ, ಪಾಕಿಸ್ತಾನಲ್ಲಿ ಪತ್ರಕರ್ತನೊಬ್ಬ ಎಮ್ಮೆಯನ್ನು ಸಂದರ್ಶನ ಮಾಡಿ ಸುದ್ದಿಯಾಗಿದ್ದಾನೆ.

ಈ ಘಟನೆ ಲಾಹೋರ್‍ನಲ್ಲಿ ನಡೆದಿದೆ. ಅಮೀನ್ ಹಫೀಜ್ ಎಂಬಾತ ಎಮ್ಮೆಯನ್ನು ಸಂದರ್ಶಿಸಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 28 ಸೆಕೆಂಡುಗಳ ವೀಡಿಯೋವನ್ನು ನೈಲಾ ಇನಾಯತ್ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಈ ವೀಡಿಯೋ ನೋಡಿದವರು ನಗದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ ಸಂದರ್ಶನದ ವೇಳೆ ಪತ್ರಕರ್ತ ಮತ್ತು ಎಮ್ಮೆಯ ನಡುವಿನ ಸಂಭಾಷಣೆ ಲಾಹೋರ್‍ಗೆ ಬಂದಿದ್ದ ಜನರನ್ನು ಸೆಳೆಯಿತು. ಪತ್ರಕರ್ತ ಎಮ್ಮೆಯ ಬಳಿ ನೀವು ಲಾಹೋರ್ ಅನ್ನು ಹೇಗೆ ಇಷ್ಟಪಟ್ಟಿದ್ದೀರಿ? ಲಾಹೋರ್‍ನಲ್ಲಿನ ಆಹಾರ ನಿಮಗೆ ಇಷ್ಟವಾಯಿತೇ ಅಥವಾ ನಿಮ್ಮ ಹಳ್ಳಿಯಲ್ಲಿನ ಆಹಾರ ರುಚಿಯಾಗಿರುತ್ತದೆಯೋ ಎಂದು ಕೇಳಿದ್ದಾನೆ. ಈತ ಪ್ರಶ್ನೆಗಳಿಗೆ ಎಮ್ಮೆಯೂ ತನ್ನದೇ ಭಾಷೆಯಲ್ಲಿ ಉತ್ತರಿಸುವುದು ಅಚ್ಚರಿ ಜೊತೆಗೆ ನಗು ತರಿಸುವಂತಿದೆ.

ಸಂದರ್ಶನದ ವೇಳೆ ಅಲ್ಲಿ ನೆರೆದಿರುವ ಜನರು ನಗುತ್ತಿರುವುದವನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೊವನ್ನು ಇದುವರೆಗೆ 6.4 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಹಲವಾರು ಲೈಕ್ಸ್ ಗಳು ಬಂದಿವೆ. ಈ ವೀಡಿಯೋಗೆ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಜುಲೈ 25ರ ಬಳಿಕ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇನೆ: ಬಿಎಸ್‍ವೈ

The post ಪಾಕ್ ಪತ್ರಕರ್ತನಿಂದ ಎಮ್ಮೆಯ ಸಂದರ್ಶನ- ವೀಡಿಯೋ ವೈರಲ್ appeared first on Public TV.

Source: publictv.in

Source link