ಬಿಗ್​​​ಬಾಸ್​​​ ಮನೆಯಲ್ಲಿ ತಮ್ಮದೇ ಡಿಫರೆಂಟ್​ಮ್ಯಾನರಿಸಂ ಮೂಲಕ ನೋಡುಗರನ್ನು ಸೆಳೆದಿದ್ದ ರಘು ಗೌಡ ಅವರು ಮನೆಯಲ್ಲಿ ತಾವು ಎಷ್ಟು ಬದಲಾಗಿದ್ದೀನಿ ಅಂತಾ ನ್ಯೂಸ್​​ಫಸ್ಟ್​​​ನೊಂದಿಗೆ ಮಾತನಾಡಿದ್ದಾರೆ.

ನಾನು ಬಿಗ್​​ಬಾಸ್​ ಮನೆಗೂ ಹೋಗೋಕು ಮುನ್ನ ಮನೆಯಲ್ಲಿ ತಿಂದ ತಟ್ಟೆಯನ್ನೇ ಎತ್ತಿ ಇಟ್ಟಿರಲಿಲ್ಲ. ಆದರೆ ಈಗ ಮನೆಗೆ ಬಂದು ಪಾತ್ರೆ, ಬಾತ್​ ರೂಂ ತೊಳಿತಿನಿ ಅಂದ್ರೆ ಬಿಡ್ತಾನೆ ಇಲ್ಲ. ಮನೆಗೆ ಬಂದ ಮೇಲೆ ನೆಲ ನೀಟಾಗಿ ಇಲ್ಲ ಎಂದು ಕ್ಲೀನ್​ ಮಾಡಿದ್ದೇನೆ. ಇದನ್ನು ಹಾಗೇ ಮುಂದುವರಿಸಿಕೊಂಡು ಹೋಗೋ ಮನಸ್ಸಿದೆ.

ಆದರೆ ಮನೆಯವರು ಅಷ್ಟೇಲ್ಲಾ ಎಕ್ಸೈಟ್ ಆಗಬೇಡ… ನಾವೇ ಕ್ಲೀನ್​ ಮಾಡ್ತೀವಿ ಬಿಡು ಅಂತಿದ್ದಾರೆ. ನಾನು ಸ್ವಲ್ಪ ಸೋಂಬೇರಿ ಅದನ್ನು ಬದಲಿಸಿಕೊಳ್ಳಲು ಬಿಗ್​ಬಾಸ್​ ಮನೆಗೆ ಹೋಗಿದ್ದು ಅನುಕೂಲ ಆಯ್ತು. ವೈಷ್ಣವಿ ಅವರಿಂದ ಯೋಗದಲ್ಲಿ ಸೂರ್ಯ ನಮಸ್ಕಾರ ಮಾಡೋದನ್ನು ಕಲಿತಿದ್ದೀನಿ. ಅದನ್ನು ಮುಂದುವರಿಸಿಕೊಂಡು ಹೋಗ್ತೀನಿ ಎಂದರು.

The post ಪಾತ್ರೆ, ಬಾತ್​ ರೂಂ ತೊಳಿತೀನಿ ಅಂದ್ರೆ ಮನೇಲಿ ಬಿಡ್ತಾನೆ ಇಲ್ಲ- ರಘು appeared first on News First Kannada.

Source: newsfirstlive.com

Source link