ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೆ ಕೊರೊನಾ ದೃಢ, ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕೆಲವೆಡೆ ಸಂಕ್ರಾಂತಿ ಆಚರಣೆ | Congress MLA Priyank Kharge tests Positive for Coronavirus Sankranti amid Covid19 Cases


ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೆ ಕೊರೊನಾ ದೃಢ, ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕೆಲವೆಡೆ ಸಂಕ್ರಾಂತಿ ಆಚರಣೆ

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ನಮ್ಮ ಸಿಬ್ಬಂದಿಗೆ ಕೊರೊನಾ ನೆಗೆಟಿವ್ ಬಂದಿದೆ. ನನ್ನ ಸಂಪರ್ಕದಲ್ಲಿದ್ದವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಅವರು ಮನವಿ ಮಾಡಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಇದೀಗ ಬೆಂಗಳೂರಿನ ನಿವಾಸದಲ್ಲಿ ಐಸೋಲೇಷನ್ ಆಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಉಪವಿಭಾಗದ 28 ಪೊಲೀಸರಿಗೆ ಕೊರೊನಾ ದೃಢವಾಗಿದೆ. ಮೇಕೆದಾಟು ಪಾದಯಾತ್ರೆ ಭದ್ರತೆಗೆ ಹೋಗಿಬಂದಿದ್ದ ಪೊಲೀಸರಲ್ಲಿ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಕೊರೊನ ಮಹಾಸ್ಪೋಟವಾಗಿದೆ. ಶನಿವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಹೊಸದಾಗಿ 1,030 ಕೇಸ್ ಗಳು ಪತ್ತೆ ಆಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,051ಕ್ಕೆ ಏರಿಕೆ ಆಗಿದೆ.

ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿ ಸಂಕ್ರಾಂತಿ ಹಬ್ಬ ಆಚರಣೆ

ಹಲವೆಡೆ ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಗ್ರಾಮದಲ್ಲಿ ಮಾಸ್ಕ್​ ಧರಿಸದೆ ಅಂತರ ಮರೆತು ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾನಂದ ನೇತೃತ್ವದಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಗಿದೆ. ಆದರೆ, ಸೋಲದೇವನಹಳ್ಳಿ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ.

ಕೊರೊನಾ‌ ನಡುವೆಯೂ ಮೈಸೂರಿನಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿ ಕಂಡುಬಂದಿದೆ. ನೂರಾರು ಹಸುಗಳಿಗೆ ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಣೆ ಮಾಡಲಾಗಿದೆ. ಮೈಸೂರಿನ ಪಿಂಜರಪೋಲ್‌ನಲ್ಲಿ ಕಿಚ್ಚು ಹಾಯಿಸಿ ಸಂಭ್ರಮಿಸಲಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹಸುಗಳ ಪುನರ್ವಸತಿ ಕೇಂದ್ರದಲ್ಲಿ ಘಟನೆ ನಡೆದಿದೆ.

ಕರ್ನಾಟಕದಲ್ಲಿ ಸಾವಿರಾರು ಕೊರೊನಾ ಕೇಸ್ ಪತ್ತೆಯಾದರೂ ಆಸ್ಪತ್ರೆಗೆ, ಆಕ್ಸಿಜನ್ ಬೆಡ್, ಐಸಿಯು ಬೆಡ್​ ದಾಖಲಾತಿ ಕಡಿಮೆ

ಕರ್ನಾಟಕ ರಾಜ್ಯದಲ್ಲಿ ಕೊವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಸಿದ್ಧತೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ವಾರ ಮತ್ತೊಂದು ಸಭೆ ನಡೆಯಲಿದೆ. ಫೆಬ್ರವರಿಯಿಂದ ಲಾಕ್​​ಡೌನ್ ಮಾಡುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. ಕೊವಿಡ್ ವಿಚಾರದಲ್ಲಿ ಸೇಫ್ ಜೋನ್​​ನಲ್ಲಿರುವ ಲೆಕ್ಕಾಚಾರ ಕೇಳಿಬಂದಿದೆ. ಸಾವಿರಾರು ಕೇಸ್ ಪತ್ತೆಯಾದರೂ ಆಸ್ಪತ್ರೆಗೆ ದಾಖಲಾತಿ ಕಡಿಮೆ ಇದೆ. 2 ವಾರದ ಆಸ್ಪತ್ರೆ ದಾಖಲಾತಿ ನೋಡಿದ್ರೆ ಸದ್ಯಕ್ಕೆ ಆತಂಕವಿಲ್ಲ. ಇನ್ನೂ ಎರಡು ವಾರ ರಾಜ್ಯ ಸರ್ಕಾರ ಕಾದು ನೋಡಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈಗ ಟ್ರೆಂಡ್ ನೋಡಿದ್ರೆ ರಾಜ್ಯಕ್ಕಿಲ್ಲ 3ನೇ ಅಲೆ ತೀವ್ರತೆ ಆತಂಕ ಎಂದು ಹೇಳಲಾಗಿದೆ.

ಆಸ್ಪತ್ರೆ ದಾಖಲಾತಿ ನೋಡಿದ್ರೆ ಯಾವುದೇ ಆತಂಕ ಇಲ್ಲ. ಆಕ್ಸಿಜನ್ ಬೆಡ್, ಐಸಿಯು ಬೆಡ್​ನಲ್ಲಿ ದಾಖಲಾತಿ ಹೆಚ್ಚುತ್ತಿಲ್ಲ. ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್​ನ ಅನಿವಾರ್ಯತೆ ಕಾಣ್ತಿಲ್ಲ. ಲಸಿಕೆ ತೆಗೆದುಕೊಳ್ಳಿ, ಕೊರೊನಾ ಆತಂಕ ಬಿಡಿ, ಎಚ್ಚರಿಕೆಯಿಂದ ಇರಿ. ಇದೇ ಮೂರನೇ ಅಲೆ ಗೆಲ್ಲುವ ಸುಲಭ ದಾರಿ ಎಂದು ತಿಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *