ಪಾದಾರ್ಪಣೆ ಪಂದ್ಯದಲ್ಲೇ ದಾಖಲೆಯ ಶತಕದ ‘ಶ್ರೇಯಸ್ಸು’ -ದಿಗ್ಗಜರ ಪಟ್ಟಿಗೆ ಸೇರ್ಪಡೆ


ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್​​ ದಾಖಲೆಯ ಟೆಸ್ಟ್​​ ಶತಕ ಸಿಡಿಸಿದ್ದಾರೆ. ಪದಾರ್ಪಣೆ ಮಾಡಿದ ಮೊದಲ ಟೆಸ್ಟ್​ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 16ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 157 ಎಸೆತಗಳನ್ನ ಎದುರಿಸಿ 100ರ ಗಡಿ ದಾಟಿದ ಅಯ್ಯರ್​ ಅವರ ಈ ಇನ್ನಿಂಗ್ಸ್​​ನಲ್ಲಿ 12 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 75ರನ್​ ಗಳಿಸಿ ಅಜೇಯರಾಗಿ ಉಳಿದಿದ್ದ, 2ನೇ ದಿನದಾಟದ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ್ರು. 91.1 ಓವರ್​​​ನಲ್ಲಿ ಜೆಮಿಸನ್​​​, ಎಸೆತದಲ್ಲಿ ಸ್ವೀಪ್​ ಕವರ್​​ನತ್ತ ಚೆಂಡನ್ನ ಸಿಡಿಸಿ ಎರಡು ಗಳಿಸಿದ ಶ್ರೇಯಸ್​​, ತಮ್ಮ ಚೊಚ್ಚಲ ಶತಕವನ್ನ ಪೂರೈಸಿದರು.

ಪ್ರಸ್ತುತ ಆಡುತ್ತಿರುವ ಕಾನ್ಪುರ ಮೈದಾನದ ಪಿಚ್​​​​ನಲ್ಲಿ ಅಯ್ಯರ್​ಗೂ ಮೊದಲು ಪದಾರ್ಪಣೆ ಪಂದ್ಯದಲ್ಲೇ ಕರ್ನಾಟಕದ ಗುಂಡಪ್ಪ ವಿಶ್ವನಾಥ್​ ಅವರು ಚೊಚ್ಚಲ ಶತಕ ಸಿಡಿಸಿದ್ದರು. ಅದು 1969 ರಲ್ಲಿ. ಇನ್ನು ಪದಾರ್ಪಣೆ ಪಂದ್ಯದಲ್ಲೇ ಭಾರತದ ಶತಕ ಸಿಡಿಸಿದ 16 ಆಟಗಾರನಾಗಿರುವ ಅಯ್ಯರ್, ನ್ಯೂಜಿಲೆಂಡ್​​ ವಿರುದ್ಧವೇ ಡೆಬ್ಯೂ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೂರನೇ ಆಟಗಾರ.

News First Live Kannada


Leave a Reply

Your email address will not be published. Required fields are marked *