ಪಾಪದ ಕೊಡ ತುಂಬಲು ನಮ್ಮಪ್ಪ ಯಾವ ಪಾಪವನ್ನೂ ಮಾಡಿಲ್ಲ- ಹೆಚ್​ಡಿಕೆಗೆ ಯತೀಂದ್ರ ವಾಗ್ದಾಳಿ

ಪಾಪದ ಕೊಡ ತುಂಬಲು ನಮ್ಮಪ್ಪ ಯಾವ ಪಾಪವನ್ನೂ ಮಾಡಿಲ್ಲ- ಹೆಚ್​ಡಿಕೆಗೆ ಯತೀಂದ್ರ ವಾಗ್ದಾಳಿ

ಮೈಸೂರು: ಸಿದ್ದರಾಮಯ್ಯನವ್ರ ಪಾಪದ ಕೊಡ ತುಂಬಿದೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರ.. ಪಾಪದ ಕೊಡ ತುಂಬಲು ನಮ್ಮಪ್ಪ ಯಾವುದೇ ಪಾಪ ಮಾಡಿಲ್ಲ ಎಂದಿದ್ದಾರೆ.

ಜೆಡಿಎಸ್‌ಗೆ ಸಿದ್ದರಾಮಯ್ಯನವ್ರು ಯಾವ ಮೋಸ ಮಾಡಿಲ್ಲ. ಬೆಳೆಯುತ್ತಿರುವ ನಾಯಕರನ್ನ ಚಿವುಟಿ ಹಾಕಲು‌ ಪಕ್ಷದಿಂದ ಉಚ್ಚಾಟಿಸಿದ್ರು. ಜೆಡಿಎಸ್‌ನಿಂದ ಹೊರಬಂದ ಮೇಲೆ ತುಂಬಾ ಒಳ್ಳೆಯದಾಗಿದೆ. ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಲು‌‌ ಮುಂದಿನ ಚುನಾವಣೆಯೂ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿದೆ. ಜೆಡಿಎಸ್ ಮಾತ್ರ ದಿನೇ ದಿನೇ ನೆಲೆ ಕಳೆದುಕೊಳ್ತಿದೆ‌ ಎಂದು ಕುಮಾರಸ್ವಾಮಿ ವಿರುದ್ದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

The post ಪಾಪದ ಕೊಡ ತುಂಬಲು ನಮ್ಮಪ್ಪ ಯಾವ ಪಾಪವನ್ನೂ ಮಾಡಿಲ್ಲ- ಹೆಚ್​ಡಿಕೆಗೆ ಯತೀಂದ್ರ ವಾಗ್ದಾಳಿ appeared first on News First Kannada.

Source: newsfirstlive.com

Source link