ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ: ಕೈ ತಿರುಗೇಟು | Karnataka Congress Hits Back at BJP Over CBI Report On Paresh mesta Case


ಪರೇಶ್ ಮೇಸ್ತ ಸಾವು ಪ್ರಕರಣ ಹಾಗೂ ಸಿಬಿಐ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಬೆಂಗಳೂರು : 2017 ಡಿಸೆಂಬರ್‌ 6ರಂದು ಉತ್ತರ ಕನ್ನಡ ಜಿಲ್ಲೆಯ ಘಟಿಸಿದ ಪರೇಶ್ ಮೆಸ್ತಾ ಎನ್ನುವ ಯುವಕನ ಸಾವು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲ-ಕಲ್ಲೋಲವಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಪರೇಶ್ ಮೆಸ್ತಾ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.

ಹೌದು….ಪರೇಶ್ ಮೆಸ್ತಾ ಸಾವಿಗೆ ಕೋಮುಬಣ್ಣ ಬಳಿದು ಕಾಂಗ್ರೆಸ್ ವಿರುದ್ಧ ಬೀದಿಗಳಿದು ದೊಡ್ಡ ರಂಪಾಟ ಮಾಡಿತ್ತು. ಆದ್ರೆ, ಇದೀಗ ಸಿಬಿಐ ಪರೇಶ್ ಮೆಸ್ತಾ ಸಾವು ಕೊಲೆ ಅಲ್ಲ. ಬದಲಿಗೆ ಅದೊಂದು ಅಹಜ ಸಾವು ಎಂದು ವರದಿ ನೀಡಿದೆ. ಇದರಿಂದ ಬಿಜೆಪಿಗೆ ಇರುಸುಮುರುಸು ಉಂಟಾಗಿದೆ. ಇನ್ನು ಇದೀಗ ಇದಕ್ಕೆ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ.

TV9 Kannada


Leave a Reply

Your email address will not be published.