ಉತ್ತರಪ್ರದೇಶ: ಒಬ್ಬ ಮನುಷ್ಯನ ಜೀವನದಲ್ಲಿ ಮದುವೆ ಅನ್ನೋ ಭಾಗ ಎಷ್ಟು ಮುಖ್ಯ ಅಂದ್ರೆ, ಅದೇನೋ ಹೇಳ್ತಾರಲ್ಲಾ, ಟರ್ನಿಂಗ್​ ಪಾಯಿಟ್​ ಆಫ್​ ಲೈಫ್​ ಅಂತ. ಆ ರೀತಿ ಇರುತ್ತೆ. ಎಲ್ಲರನ್ನೂ ಆಹ್ವಾನಿಸಿ, ಕುಂಕುಮ ಅರಿಶಿಣ ಕೊಟ್ಟು ಧಾಂಧೂಂ ಅಂತ ಮದುವೆ ಮಾಡ್ತಾರೆ. ಈಗ ಕೊರೊನಾ ಅಲ್ವಾ, ಜನ ತುಂಬಾ ಹುಷಾರಾಗಿ ತಮ್ಮ ಸಮಾರಂಭಗಳನ್ನ ತಮಗೆ ಬಕಾದ ಚೌಕಟ್ಟಿನಲ್ಲಿ ಮಾಡಿಕೊಳ್ತಾರೆ. ಇಲ್ಲೂ ಅಷ್ಟೇ ಒಂದು ನವ ದಂಪತಿ ಇನ್ನೇನು ಅಗೋ ಇಗೋ ಅಂದ್ರೆ ಮದುವೆ ಮಾಡಿಕೊಂಡು ಇಷ್ಟೊತ್ತಿಗಾಗ್ಲೇ ಹೆಣ್ಮಗಳು ಅತ್ತೆ ಮನೆನೂ ಸೇರಿರ್ತದ್ಲೂ, ಆದ್ರೆ, ಅದು ಆಗ್ಲೇ ಇಲ್ಲ. ಅಷ್ಟೊಂದೆಲ್ಲಾ ಕನಸು ಕಂಡಿದ್ದ ವಧುವಿಗೆ ಹಾಗೂ ವಧು ಮನೆಯವರಿಗೆ, ಜೊತೆ ವರನಕಡೆಯವರಿಗೂ ವರ ದೊಡ್ಡ ಶಾಕ್​ನ್ನ ಕೊಟ್ಟಿದ್ದ.

ಹೌದೂ, ಉತ್ತರಪ್ರದೇಶದ ಹಮಿರ್​ಪುರದಲ್ಲಿ, ಸರಿ ಸುಮಾರು 11ಗಂಟೆ ಬಾಕಿಯಿತ್ತು ಅಷ್ಟೇ ಮದುವೆ ಆಗೋದಕ್ಕೆ, ಅಷರೊಳಗೆ, ವರನಿಗೆ ಕೊರೊನಾ ಪಾಸಿಟಿವ್ ಅನ್ನೋ ರಿಪೋರ್ಟ್​ ಬಂದಿದೆ.ಕೂಡಲೇ, ವರನ ಮನೆಯವರು ಮದುವೆಯನ್ನ ಕ್ಯಾನ್ಸಲ್​ ಮಾಡಿದ್ದಾರೆ. ಸದ್ಯ ವರ ಕ್ವಾರಂಟೈನ್​ನಲ್ಲಿದ್ದು,ವರನ ಜೊತೆ ಸಂಪರ್ಕದಲ್ಲಿದ್ದವರಿಗೆಲ್ಲಾ ಟೆಸ್ಟ್​ ಮಾಡಿಸಲಾಗಿದೆ. ಇದೀಗ, ವಧು ಹಾಗೂ ವರನ ಮನೆಯವರೆಲ್ಲಾ ಈಗ ಮದುವೆಯನ್ನ ಪೋಸ್ಟ್​ಪೋನ್​ ಮಾಡಿದ್ದಾರೆ.

The post ಪಾಪ ಕಣ್ರಿ.. ಇನ್ನೇನು ಕೆಲವೇ ಗಂಟೆಯಲ್ಲಿ ಮದ್ವೆಯಾಗಬೇಕಿತ್ತು; ವರನಿಗೆ ಕೊರೊನಾ ಬಂದಿದ್ರಿಂದ ಏನಾಯ್ತು? appeared first on News First Kannada.

Source: newsfirstlive.com

Source link