ಪಾಪ ಸನ್ನಿ ಲಿಯೋನ್​ಗೇ ಮೋಸ ಮಾಡಿದ ಕಿರಾತಕರು; ಪ್ಯಾನ್​ಕಾರ್ಡ್​​ ಬಳಸಿ ಪಡೆದ ಸಾಲ ಎಷ್ಟು?


ಅವ್ರು ಮನುಷ್ಯರೇನ್ರಿ.. ಸನ್ನಿ ಲಿಯೋನ್​ಗೇ ಮೋಸ ಮಾಡೋಕೆ ಮನಸ್ಸು  ಹ್ಯಾಗೆ ಬರುತ್ತೆ ಕಣ್ರಿ.. ಅದೂ ಕೂಡ ಆಕೆಗೆ ಗೊತ್ತೇ ಆಗದಂತೆ ಅವರ ಪ್ಯಾನ್​ಕಾರ್ಡ್​ ಬಳಸಿ ಸಾಲ ಪಡೆದಿರೋ ಕಿರಾತಕರು ಸನ್ನಿ ಮೃದು ಮನಸ್ಸಿಗೆ ಎಷ್ಟು ಘಾಸಿ ಮಾಡಿದ್ದಾರೆ ನೋಡ್ರಿ.. ಅಂತ ಇಂದು ಸನ್ನಿ ಲಿಯೋನ್​ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಇದಕ್ಕೆ ಕಾರಣ ಆಗಿದ್ದ ಸನ್ನಿ ಲಿಯೋನ್ನೇ ಮಾಡಿದ ಒಂದು ಟ್ವೀಟ್.. ಹೌದು.. ಇಂದಿನ ಡಿಜಿಟಲ್ ಜಮಾನಾದಲ್ಲಿ ಯಾರು..ಯಾರಿಗೆ ಮತ್ತು ಹೇಗೆ ಮೋಸ ಮಾಡ್ತಾರೆ ಅನ್ನೋದನ್ನ ಊಹಿಸೋದಕ್ಕೂ ಆಗೋದಿಲ್ಲ.. ಅಂಥದ್ದೇ ಒಂದು ಮೋಸವನ್ನ ಸನ್ನಿ ಲಿಯೋನಿಗೂ ಮಾಡಿದ್ದಾರೆ ಕಿರಾತಕರು. ಸನ್ನಿ ಲಿಯೋನಿ ಪ್ಯಾನ್​ಕಾರ್ಡ್​ ಬಳಸ ಅವರ ಹೆಸರಿನಲ್ಲಿ ಅವರಿಗೆ ಗೊತ್ತೇ ಆಗದಹಾಗೆ ಲೋನ್​ ಅನ್ನ ತೆಗೆಯಲಾಗಿದೆ.. ಅದೂ ಕೂಡ ಅವರ ಸಿಬಿಲ್ ಸ್ಕೋರ್​ಗೆ ಎಫೆಕ್ಟ್​ ಆದ ನಂತರವೇ ಸನ್ನಿಗೆ ಈ ಬಗ್ಗೆ ಮಾಹಿತಿ ಗೊತ್ತಾಗಿದ್ದು ತೀವ್ರ ನೊಂದುಕೊಳ್ಳಲು ಕಾರಣವಾಗಿದೆ.

ಅಷ್ಟಕ್ಕೂ ಆಗಿದ್ದು ಏನು?

ಐವಿಎಲ್​ ಸೆಕ್ಯೂರಿಟೀಸ್ ಮೂಲಕ ಸನ್ನಿ ಲಿಯೋನ್ ಹೂಡಿಕೆ ಮಾಡಿರ್ತಾರೆ.. ಆ ವೇಳೆ ಅವರು ಅಲ್ಲಿ ತಮ್ಮ ಪ್ಯಾನ್​ಕಾರ್ಡ್​ ಕೂಡ ನೀಡಿರುತ್ತಾರೆ. ಆದ್ರೆ ಅದೇ ಪ್ಯಾನ್​ ಕಾರ್ಡ್​ ಬಳಸಿ ಯಾರೋ ಆಗಂತುಕರು ಸನ್ನಿ ಲಿಯೋನ್ ಹೆಸ್ರಲ್ಲಿ 2,000 ಎಸ್ ಕೇವಲ ಎರಡು ಸಾವಿರ ರೂಪಾಯಿ ಸಾಲ ಪಡೆದಿರ್ತಾರೆ.. ಅದು ಸಿಬಿಲ್ ಸ್ಕೋರ್​ಗೆ ಎಫೆಕ್ಟ್​ ಆದಾಗಲೇ ಆ ಬಗ್ಗೆ ಸನ್ನಿ ಲಿಯೋನ್ ಗಮನಕ್ಕೆ ಬಂದಿರುತ್ತೆ. ಅದನ್ನು ಮನಗಂಡ ಸನ್ನಿ ಲಿಯೋನ್ ಇಂದು ಟ್ವೀಟ್ ಒಂದನ್ನು ಮಾಡಿ ಐವಿಎಲ್ ಸೆಕ್ಯುರಿಟಿಯಿಂದ ಇದನ್ನು ಊಹೆ ಮಾಡಿರಲಿಲ್ಲ..ಐವಿಎಲ್ ಸೆಕ್ಯುರಿಟೀಸ್ ನನಗೆ ಯಾವುದೇ ಸಹಾಯ ಮಾಡಲಿಲ್ಲ..ಇಂಡಿಯಾ ಬುಲ್ಸ್ ಇದಕ್ಕೆ ಹೇಗೆ ಅವಕಾಶ ಕೊಟ್ಟಿತು.. ನನ್ನ ಸಿಬಿಲ್ ಸ್ಕೋರ್ ಹದಗೆಟ್ಟು ಹೋಯ್ತು ಅಂತಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.

 

ಅಲ್ಲದೇ ತಮ್ಮ ಹೆಸರಿನ ಮೇಲೆ ಸಾಲ ಪಡೆದು ವಂಚಿಸಲಾಗಿದೆ ಎಂದು ನಟಿ ಸನ್ನಿ ಲಿಯೋನ್​ ಆರೋಪ ಮಾಡಿದ್ದು, ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಧನಿ ಸ್ಟಾಕ್ಸ್ ಲಿಮಿಟೆಡ್‌ನಲ್ಲಿ ತಮ್ಮ ಹೆಸರಿನ ಗುರುತಿನ ಚೀಟಿ ಬಳಿಸಿ ಸಾಲ ಪಡೆದು ವಂಚಿಸಲಾಗಿದೆ ಎಂದು ತಿಳಿಸಿದ್ರು.

ಈ ಕುರಿತು ಟ್ವಿಟರ್​​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸನ್ನಿ ಲಿಯೋನ್​​, ಕೆಲ ಇಡಿಯಟ್​​ಗಳು ನನ್ನ ಪ್ಯಾನ್​ ಕಾರ್ಡ್​ ಬಳಕೆ ಮಾಡಿ 2000 ಸಾವಿರ ರೂಪಾಯಿ ಲೋನ್​ ಪಡೆದುಕೊಂಡಿದ್ದು, ಇಂಡಿಯಾ ಬುಲ್ಸ್ ಸೆಕ್ಯುರಿಟಿ ಲಿಮಿಟೆಡ್​​ ಮತ್ತು ಇಂಡಿಯಾ ಬುಲ್ಸ್​ ಹೋಮ್​ ಲೋನ್ಸ್​ ಅನ್ನು ಟ್ಯಾಗ್​ ಮಾಡಿದ್ದಾರೆ. ಅಲ್ಲದೇ ಕಂಪನಿಗಳು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ರು.

ಯಾವಾಗ ಸನ್ನಿ ಲಿಯೋನ್ ಈ ಟ್ವಿಟ್ ಮಾಡಿದ್ರೋ.. ಥರಗುಟ್ಟಿದ ಧನಿ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ. ಈ ಬಗ್ಗೆ ಮತ್ತೊಂದು ಟ್ವೀಟ್​​ ಮೂಲಕ ಸನ್ನಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಕೆಟ್ಟ CIBILನೊಂದಿಗೆ ವ್ಯವಹರಿಸಲು ಯಾರೂ ಬಯಸೋದಿಲ್ಲ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಾಗದಂತೆ ಕ್ರಮವಹಿಸುತ್ತೀರಿ ಎಂದು ತಿಳಿಯುತ್ತೇನೆ ಅಂತ ಹೇಳಿದ್ದಾರೆ.

ಸನ್ನಿ ಲಿಯೋನ್ ಕೇಸ್ ಏನೋ ಇಷ್ಟು ಬೇಗ ಮುಗಿದು ಹೋಯ್ತು.. ಆದ್ರೆ ಇದೇ ರೀತಿ ಮೋಸ ಹೋಗಿ.. ಅಲೆದು ಅಲೆದು ಸುಸ್ತಾದ ಗ್ರಾಹಕರು ಕೂಡ ಕಮೆಂಟ್ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ದೊಡ್ಡ ಮನಸ್ಸಿನ ಸನ್ನಿ ಅವರಿಗೂ ಹೆಲ್ಪ್ ಮಾಡುವಂತೆ ಟ್ವೀಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ.

News First Live Kannada


Leave a Reply

Your email address will not be published. Required fields are marked *