ಬೆಂಗಳೂರು: ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯ ಯಡವಟ್ಟಿನಿಂದಾಗಿ ಇನೋವಾ ಕ್ರಿಸ್ತಾ ಕಾರು ಕಳ್ಳರ ಪಾಲಾದ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗರಾಜು ಎಂಬುವವರು ಕಳೆದ ನವೆಂಬರ್ 5 ರಂದು ಮೆಗ್ರಾಥ್ ರಸ್ತೆಯ ಆರ್ಬರ್ ಪಬ್ಗೆ ಇನೋವಾ ಕ್ರಿಸ್ತಾ ಕಾರಿನಲ್ಲಿ ಬಂದಿದ್ರು. ಈ ವೇಳೆ ತಮ್ಮ ಕಾರನ್ನ ವ್ಯಾಲೆಟ್ ಪಾರ್ಕಿಂಗ್ಗೆ ಕೊಟ್ಟು ಊಟಕ್ಕೆ ತೆರಳಿದ್ರು. ಪಾರ್ಕಿಂಗ್ ಸಿಬ್ಬಂದಿ ಕಾರ್ ನಂಬರನ್ನು ಎಂಟ್ರಿ ಮಾಡ್ಕೊಂಡು ರಸೀದಿಯನ್ನು ಸಹ ಕೊಟ್ಟಿದ್ರು. ಆದರೆ ಊಟ ಮಾಡಿ ಬರೋದರೊಳಗಾಗಿ ಕಾರು ನಾಪತ್ತೆಯಾಗಿದೆ.
ಇದನ್ನೂ ಓದಿ:ಪೆಟ್ರೋಲ್ ದರ ಇಳಿಸಿದ ಬೆನ್ನಲ್ಲೇ ‘ನವೆಂಬರ್ ನಂತರ PMGKAY ಅಡಿ ಉಚಿತ ಪಡಿತರ ಸಿಗಲ್ಲ’ ಎಂದ ಕೇಂದ್ರ
ಕಾರನ್ನ ಕದಿಯಲು ಪ್ಲಾನ್ ರೂಪಿಸಿದ್ದ ಖದೀಮರು ನೇರವಾಗಿ ಪಾರ್ಕಿಂಗ್ ಸಿಬ್ಬಂದಿ ಬಳಿ ಬಂದು ನಾವು ಹೊರಟಿದ್ದೀವಿ ಕಾರಿನ ಕೀ ಕೊಡುವುದಾಗಿ ಕೇಳಿದ್ದಾರೆ. ಈ ವೇಳೆ ಕಾರು ಯಾರದ್ದು ಅದರು ಮಾಲೀಕರು ಇವರೇನಾ ಎಂದು ಚೆಕ್ ಮಾಡಿಕೊಳ್ಳದ ಸಿಬ್ಬಂದಿ ಕಾರ್ ಕೀ ಕೊಟ್ಟಿದ್ದಾನೆ. ಕಾರು ಕೀ ಸಿಕ್ಕಿದ್ದೇ ತಡ ಕಳ್ಳರು ಆರಾಮಗಿ ಕಾರ್ ಎಗರಸಿಕೊಂಡು ಹೋಗಿದ್ದಾರೆ. ಆ ಬಳಿಕ ಬಂದ ಲಿಂಗರಾಜ್ ಕಾರ್ ಕೀ ಕೇಳಿದಾಗ ಸಿಬ್ಬಂದಿಯ ಯಡವಟ್ಟು ಬಯಲಾಗಿದೆ. ಸದ್ಯ ಪಾರ್ಕಿಂಗ್ ಸಿಬ್ಬಂದಿಯ ವಿರುದ್ಧ ಕಾರು ಮಾಲೀಕನಿಂದ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:‘ಪರಮಾತ್ಮ’ನಿಗೆ ಪರಭಾಷೆಯಲ್ಲಿ ಬೇಡಿಕೆ ಬಂದರೂ ಚಂದನವನದಲಿದ್ದು ಕನ್ನಡಾಭಿಮಾನ ಮೆರೆದಿದ್ದರು ಅಪ್ಪು