
ಐಶ್ವರ್ಯಾ-ಅಭಿಷೇಕ್-ಸಲ್ಲು
ಶಾರುಖ್ ಖಾನ್, ಆಮಿರ್ ಖಾನ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿ ಅನೇಕರು ಈ ಪಾರ್ಟಿಗೆ ಆಗಮಿಸಿದ್ದರು. ಅಂತೆಯೇ ಸಲ್ಲು, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಕೂಡ ಈ ಪಾರ್ಟಿಯಲ್ಲಿ ಸೇರಿದ್ದರು.
ಐಶ್ವರ್ಯಾ ರೈ (Aishwarya Rai) ಹಾಗೂ ಸಲ್ಮಾನ್ ಖಾನ್ ಒಂದು ಕಾಲದಲ್ಲಿ ಒಟ್ಟಾಗಿ ಸುತ್ತಾಡಿದ್ದರು. ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆದರೆ, ಇದು ಮದುವೆವರೆಗೆ ಹೋಗಲೇ ಇಲ್ಲ. ಇಬ್ಬರ ಪ್ರೀತಿ ಅರ್ಧದಲ್ಲೇ ಕಟ್ ಆಯಿತು. ಇದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢ. ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ (Abhishek Bachchan) ಅವರನ್ನು ಮದುವೆ ಆಗಿದ್ದಾರೆ. ಅವರಿಗೆ ಆರಾಧ್ಯ ಹೆಸರಿನ ಮಗಳು ಇದ್ದಾಳೆ. ಸಲ್ಮಾನ್ ಹಾಗೂ ಐಶ್ವರ್ಯಾ ಒಂದೇ ಇಂಡಸ್ಟ್ರಿಯಲ್ಲಿ ಇರುವವರು. ಈ ಕಾರಣಕ್ಕೆ ಇಬ್ಬರೂ ಅನೇಕಬಾರಿ ಎದುರಾಗುವು ಪರಿಸ್ಥಿತಿ ಬಂದೊದಗುತ್ತದೆ. ಇತ್ತೀಚೆಗೆ ನಡೆದ ಕರಣ್ ಜೋಹರ್ (Karan Johar) ಪಾರ್ಟಿಯಲ್ಲೂ ಹಾಗೆಯೇ ಆಗಿದೆ. ಸಲ್ಲುನ ಕಂಡು ಐಶ್ವರ್ಯಾ ಮುಜುಗರಕ್ಕೆ ಒಳಗಾದರು ಎಂದು ವರದಿ ಆಗಿದೆ.
ಮೇ 25ರಂದು ಕರಣ್ ಜೋಹರ್ ಬರ್ತ್ಡೇ ಆಚರಿಸಿಕೊಂಡರು. ಇದು ಅವರ 50ನೇ ವರ್ಷದ ಬರ್ತ್ಡೇ ಆದ್ದರಿಂದ ದೊಡ್ಡ ಮಟ್ಟದಲ್ಲೇ ಪಾರ್ಟಿ ಇತ್ತು. ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಇಲ್ಲಿ ಹಾಜರಿ ಹಾಕಿದ್ದರು. ಶಾರುಖ್ ಖಾನ್, ಆಮಿರ್ ಖಾನ್, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿ ಅನೇಕರು ಈ ಪಾರ್ಟಿಗೆ ಆಗಮಿಸಿದ್ದರು. ಅಂತೆಯೇ ಸಲ್ಲು, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಕೂಡ ಈ ಪಾರ್ಟಿಯಲ್ಲಿ ಸೇರಿದ್ದರು.