ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ? | Horse gram or Madras gram know its health benefits in kannada

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಎಲ್ಲರಿಗೂ ಗೊತ್ತು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ ಹೇಗಿದೆ ಎಂದು ನಾವೇ ಅವಲೋಕನ ಮಾಡಿಕೊಳ್ಳಬೇಕು. ಅಂದರೆ ಅಕ್ಕಿ ಬೇಳೆಗಳೆಲ್ಲ ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ಗಟ್ಟಿಯಾದ ಕಾಳುಗಳನ್ನು ನಾವು ಎಷ್ಟು ಉಪಯೋಗಿಸುತ್ತಿದ್ದೇವೆ?

ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?

ಇಂಥ ಗಟ್ಟಿ ಕಾಳುಗಳಲ್ಲಿ ಕಬ್ಬಿಣ, ಪ್ರೋಟಿನ್, ಹಾಗೂ ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ವಿಶೇಷ ಕಾಳುಗಳಿಗೆ… ಅದುವೇ ಹುಳ್ಳಿ ಕಾಳು, ಹುರುಳಿ ಕಾಳು ಅಥವಾ ಜುರಳಿ ಕಾಳು. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕುಲತಿ, ಕುಲತ್ಥಿ ಎಂದೂ ಆಂಗ್ಲ ಭಾಷೆಯಲ್ಲಿ Horse gram, Madras gram ಮತ್ತು ಸಂಸ್ಕೃತ ಭಾಷೆಯಲ್ಲಿ ಕುಲತ್ಥಿಕಾ, ಕುಲತ್ಥ ಎಂದು ಕರೆಯುತ್ತಾರೆ.

ಹುರುಳಿ ಕಾಳು ಉತ್ತರ ಕರ್ನಾಟಕದ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಒಂದು ಪ್ರಮುಖ ಬೆಳೆ. ಕೆಲವು ವರ್ಷಗಳ ಹಿಂದಿನವರೆಗೂ ಹುರುಳಿ ಕಾಳು ನೆನೆಸಿ ರೈತರು ಎತ್ತುಗಳಿಗೆ ತಿನ್ನಿಸುತ್ತಿದ್ದರು. ಇನ್ನು, ಜಟಕಾ ಬಂಡಿಯವರು ಕುದುರೆಗಳಿಗೆ ತಿನ್ನಿಸುತ್ತಿದ್ದರು. ಇದು ಕುದುರೆಗಳಿಗೆ ಅತ್ಯಂತ ಪ್ರಿಯವಾದ ಆಹಾರ. ಕುದರೆಗಳಿಗೇ ಶಕ್ತಿ ಕೊಡುವ ಈ ಹುರುಳಿ ಕಾಳು ಮನುಷ್ಯನಿಗೆ ಇನ್ನೆಷ್ಟು ಶಕ್ತಿ ಕೊಡಬಹುದು, ಅಲ್ಲವಾ? ಹೌದು ಇದರಲ್ಲಿ ಅಷ್ಟು ಅಗಾಧವಾದ ಶಕ್ತಿ ಇದೆ.

ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿದೆ ಈ ಹುರುಳಿ ಕಾಳು. ಈ ಹಿಂದೆ, ಹುರುಳಿ ಕಾಳು ಹುರಿದು ತಿನ್ನಲು ಕೊಡುತ್ತಿದ್ದರು. ಹುರುಳಿ ಕಾಳನ್ನು ಮೊಳಕೆ ಬರಿಸಿ, ಹಸಿಯಾಗಿ ಅಥವಾ ಪಲ್ಯ ಮಾಡಿ ತಿನ್ನಬಹುದು. ಹುರುಳಿ ಕಾಳಿನ ಹೋಳಿಗೆ (ಒಬ್ಬಟ್ಟು) ಹುರುಳಿ ಕಟ್ಟು, ರೈತಾಪಿ ಜನರ ಹಾಗೂ ಬಡವರ ಪ್ರಿಯವಾದ ಆಹಾರ. ಎಷ್ಟೋ ಜನರಿಗೆ ಹುರುಳಿ ಕಾಳಿನ ಪರಿಚಯವಿಲ್ಲ. ಈ ಹುರುಳಿ ಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

TV9 Kannada

Leave a Reply

Your email address will not be published.