ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಇಂದು ಪಾಸಿಟಿವಿಟಿ ರೇಟ್​ನಲ್ಲಿ ನಿನ್ನೆಗಿಂತ 2 ಪಾಯಿಂಟ್ಸ್​ ಕುಸಿದಿದ್ದು, ಶೇಕಡಾ 10.66ಕ್ಕೆ ಬಂದು ನಿಂತಿದೆ.

ಹೀಗಿದ್ದೂ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ಗಳನ್ನ ಗಮನಿಸಿದ್ರೆ ಆತಂಕ ಹುಟ್ಟಿಸುತ್ತಿದೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್​ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಶೇಕಡಾ 30.23 ಪಾಸಿಟಿವಿಟಿ ದರ ಹೊಂದಿ ಮೊದಲ ಸ್ಥಾನದಲ್ಲಿ ಇದೆ.

ಇನ್ನು, ಎರಡನೇ ಸ್ಥಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯಿದ್ದು, ಈ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್​ ಶೇ. 24.20 ಇದೆ. ಮೂರನೇ ಸ್ಥಾನದಲ್ಲಿ  ಚಿತ್ರದುರ್ಗವಿದ್ದು, ಶೇ.19.71 ಪಾಸಿಟಿವಿಟಿ ರೇಟ್ ಇದೆ. ಬೀದರ್​ ಜಿಲ್ಲೆ ಕಡೇ ಸ್ಥಾನದಲ್ಲಿದ್ದು ಪಾಸಿಟಿವಿಟಿ ರೇಟ್​ ಶೇ.0.85 ಇದೆ.

The post ಪಾಸಿಟಿವಿಟಿ ರೇಟ್​​ನಲ್ಲಿ ಮೈಸೂರಿಗೆ ಮೊದಲ ಸ್ಥಾನ; ಯಾವ್ಯಾವ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ? appeared first on News First Kannada.

Source: newsfirstlive.com

Source link