ಬೆಂಗಳೂರು: ರಾಜ್ಯದಾದ್ಯಂತ ಇಂದು 42,037 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,00,254 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,42,291 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ ಇಂದು 13,800 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 26,83,314 ಕ್ಕೆ ಏರಿಕೆಯಾಗಿದೆ.

ಇಂದು 25,346 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಈವರೆಗೆ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 23,83,758ಕ್ಕೆ ಏರಿಕೆಯಾಗಿದೆ. 365 ಮಂದಿ ಇಂದು ಸೋಂಕಿನಿಂದ ಮೃತಪಟ್ಟಿದ್ದರೆ.. ಈವರೆಗೆ ಸೋಂಕಿನಿಂದಾಗಿ ಬಲಿಯಾದವರ ಸಂಖ್ಯೆ 31,260ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,68,275 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ ಕುಸಿದಿದ್ದು, ಇದೇ ಮೊದಲ ಬಾರಿಗೆ 9.66 ಪರ್ಸೆಂಟ್​​ಗೆ ಬಂದು ನಿಂತಿದೆ. ಹೀಗಿದ್ದರೂ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಾತ್ರ ಹಾಗೇ ಇದೆ. ಇಂದು 365 ಮಂದಿ ಸೋಂಕಿಗೆ ಬಲಿಯಾಗಿದ್ದು, ಮರಣದ ದರ ಶೇ.2.64 ರಷ್ಟಿದೆ.

The post ಪಾಸಿಟಿವಿಟಿ ರೇಟ್​ ಕಮ್ಮಿಯಾಗ್ತಿದ್ರೂ ನಿಲ್ಲದ ಮರಣ ಮೃದಂಗ; ರಾಜ್ಯದಲ್ಲಿಂದು 365 ಮಂದಿ ಸಾವು appeared first on News First Kannada.

Source: newsfirstlive.com

Source link