ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇಂದು 4,436 ಹೊಸ ಪ್ರಕರಣಗಳು ಪತ್ತೆಯಾಗಿವೆ. 123 ಜನ ಸೋಂಕಿತರನ್ನು ಮಹಾಮಾರಿ ಬಲಿ ಪಡೆದಿದೆ.

ಇಂದು 6,455 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 1,16,450 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 28,19,465 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.59ಕ್ಕೆ ಇಳಿಕೆಯಾಗಿದೆ, ಮರಣ ಪ್ರಮಾಣ ಶೇ.2.77ಕ್ಕೆ ಕುಸಿದಿದೆ. ಇಂದು ಒಟ್ಟು 1,70,654 ಸ್ಯಾಂಪಲ್ ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ

 

ರಾಜಧಾನಿ ಬೆಂಗಳೂರಿನಲ್ಲಿ 1008 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ನಗರದಲ್ಲಿ 69,257 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 1,071 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 9, ಬಳ್ಳಾರಿ 42, ಬೆಳಗಾವಿ 179, ಬೆಂಗಳೂರು ಗ್ರಾಮಾಂತರ 125, ಬೆಂಗಳೂರು ನಗರ 1008, ಬೀದರ್ 1, ಚಾಮರಾಜನಗರ 89, ಚಿಕ್ಕಬಳ್ಳಾಪುರ 103, ಚಿಕ್ಕಮಗಳೂರು 163, ಚಿತ್ರದುರ್ಗ 57, ದಕ್ಷಿಣ ಕನ್ನಡ 538, ದಾವಣಗೆರೆ 119, ಧಾರವಾಡ 90, ಗದಗ 15, ಹಾಸನ 301, ಹಾವೇರಿ 24, ಕಲಬುರಗಿ 41, ಕೊಡಗು 152, ಕೋಲಾರ 92, ಕೊಪ್ಪಳ 32, ಮಂಡ್ಯ 110, ಮೈಸೂರು 499, ರಾಯಚೂರು 21, ರಾಮನಗರ 26, ಶಿವಮೊಗ್ಗ 219, ತುಮಕೂರು 126, ಉಡುಪಿ 135, ಉತ್ತರ ಕನ್ನಡ 104, ವಿಜಯಪುರ 7 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

The post ಪಾಸಿಟಿವಿಟಿ ರೇಟ್ ಶೇ.2.59ಕ್ಕೆ ಇಳಿಕೆ- 4,436 ಹೊಸ ಕೇಸ್, 123 ಜನ ಸಾವು appeared first on Public TV.

Source: publictv.in

Source link