ನವದೆಹಲಿ: ಆನ್‌ಲೈನ್‌ನಲ್ಲಿ ಸಿನಿಮಾ, ಧಾರಾವಾಹಿ, ವೆಬ್‌ ಸರಣಿಗಳನ್ನು ಪ್ರಸಾರ ಮಾಡುವ ನೆಟ್‌ಫ್ಲಿಕ್ಸ್‌ ಯಾರಿಗೆ ಗೊತ್ತಿಲ್ಲ? ನೆಟ್‌ಫ್ಲಿಕ್ಸ್‌, ಅಮೆಜಾನ್‌ ಶುರುವಾದ ಮೇಲೆ ಹೊಸತಾಗಿ ಬಂದ ಸಿನಿಮಾಗಳನ್ನು ಕೂಡಲೇ ನಕಲಿ ಮಾಡಿ ಆನ್‌ಲೈನ್‌ನಲ್ಲಿ ಬಿಡುವ ದಂಧೆಕೋರರಿಗೆ ಕಡಿವಾಣ ಬಿದ್ದಿದೆ. ಆದರೂ ನೆಟ್‌ಫ್ಲಿಕ್ಸ್‌ ಸಮಸ್ಯೆಯಿಂದ ಮುಕ್ತವಾಗಿಲ್ಲ. ಅದರ ಚಂದಾದಾರಿಕೆ ತುಸು ದುಬಾರಿಯಾಗಿರುವುದರಿಂದ, ಹಲವರು ಇನ್ನೊಬ್ಬರ ಖಾತೆ ಮತ್ತು ಪಾಸ್‌ವರ್ಡ್‌ ಬಳಸಿ ವೀಕ್ಷಣೆ ಮಾಡುತ್ತಾರೆ. ಇದನ್ನು ತಡೆಯಲು ನೆಟ್‌ಫ್ಲಿಕ್ಸ್‌ ಮುಂದಾಗಿದೆ. ಅದಕ್ಕಾಗಿಯೇ ಒಂದು ತಂತ್ರಜ್ಞಾನ ಬಳಸಿದೆ.

ನಿಮ್ಮ ಮೊಬೈಲ್‌ ಸಂಖ್ಯೆಗೆ ಅಥವಾ ಇ-ಮೇಲ್‌ಗೆ ವೆರಿಫಿಕೇಶನ್‌ ಮಾಡಲು ಸಂದೇಶ ಬರುತ್ತದೆ. ಅದನ್ನು ನಿರ್ಲಕ್ಷಿಸಿದರೆ ಕೆಲ ಸಮಯ ಬಿಟ್ಟು ಮತ್ತೆ ಸಂದೇಶ ಬರುತ್ತದೆ. ಆಗ ನೀವು ಅಗತ್ಯ ಪ್ರಕ್ರಿಯೆಗಳನ್ನು ಮಾಡಿದರೆ ಮಾತ್ರ ಮುಂದುವರಿಯಲು ಸಾಧ್ಯ. ಇಲ್ಲವಾದರೆ ನೀವು ನೋಡಲು ಸಾಧ್ಯವಾಗುವುದಿಲ್ಲ. ಹೀಗೆ ಬಳಕೆದಾರರು ಹೊಸತಾಗಿ ಖಾತೆ ತೆರೆಯಲೇಬೇಕಾದಂತೆ ಅನಿವಾರ್ಯತೆ ಸೃಷ್ಟಿಸಲು ಅದು ಮುಂದಾಗಿದೆ.

ಇದನ್ನೂ ಓದಿ :“ಪೋಕ್ಸೋ’ ವಯೋಮಿತಿ 18ರಿಂದ 16ಕ್ಕೆ ಇಳಿಕೆ? ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸ್ಸು

 

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More