ನವದೆಹಲಿ: ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪಿಂಕ್‌ಬಾಲ್ ಟೆಸ್ಟ್ ಪ್ರತಿಪಾದಕ ಕೀತ್ ಬ್ರಾಡ್‌ಶಾ (58) ನಿಧನರಾಗಿದ್ದಾರೆ.
ಕ್ರಿಕೆಟ್ ವಲಯದಲ್ಲಿ ಪ್ರೀತಿಪಾತ್ರರಾಗಿದ್ದ ಮತ್ತು ಗೌರವಾನ್ವಿತರಾಗಿದ್ದ ಕೀತ್ ಬ್ರಾಡ್ ಶಾ ಸಾವನ್ನಪ್ಪಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. 1980ರಲ್ಲಿ ಆಸ್ಟ್ರೇಲಿಯಾದ ಟಾಸ್ಮೇನಿಯಾ ತಂಡದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಕೀತ್ ಬ್ರಾಡ್, ನಂತರ ಇಂಗ್ಲೆಂಡ್‌ಗೆ ತೆರಳಿದ್ದರು.
2006ರಲ್ಲಿ ಎಂಸಿಸಿಗೆ ಪ್ರಥಮ ಬ್ರಿಟಿಷೇತರ ಸಿಇಒ ಆಗಿ ನೇಮಕವಾಗಿದ್ದರು. 2008ರಲ್ಲಿ ಮಲ್ಟಿಪಲ್ ಮೈಲೊಮಾ ಕಾಯಿಲೆ ಇರೋದು ಗೊತ್ತಾಗಿತ್ತು. 2011ರಲ್ಲಿ ಆಸ್ಟ್ರೇಲಿಯಾಕ್ಕೆ ಮರಳಿದ್ದ ಕೀತ್ ಬ್ರಾಡ್ ಶಾ, ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಸಿಇಒ ಆಗಿ ನೇಮಕವಾಗಿದ್ದರು. ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಆರಂಭಕ್ಕೆ ಶ್ರಮಿಸಿ ಯಶಸ್ವಿಯಾದರು. 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆದಿತ್ತು.