ನವದೆಹಲಿ: ಇಂದು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ಇಂದ 8ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಸಂವಾದದ ಮೂಲಕ ಸ್ವತಃ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡಲಿದ್ದಾರೆ.

ಪಿಎಂ ಕಿಸಾನ್ ಯೋಜನೆಯಿಂದ ದೇಶದ 9.5 ಕೋಟಿ ರೈತರಿಗೆ ಲಾಭವಾಗಲಿದ್ದು ಒಟ್ಟು 19,000 ಕೋಟಿ ಹಣ ಬಿಡುಗಡೆಯಾಗಲಿದೆ. ಯಾವೆಲ್ಲ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದಾರೋ ಅವರ ಖಾತೆಗೆ ಇಂದು ಹಣ ನೇರವಾಗಿ ಜಮೆಯಾಗಲಿದೆ. ಪ್ರತಿ ರೈತನಿಗೆ ಮೂರು ಕಂತುಗಳ ಒಟ್ಟು 6000 ರೂ ಜಮೆಯಾಗಲಿದೆ ಎನ್ನಲಾಗಿದೆ.

The post ಪಿಎಂ ಕಿಸಾನ್ ಯೋಜನೆ: ಇಂದು 8ನೇ ಕಂತಿನ ಹಣ ಬಿಡುಗಡೆ.. 9.5 ಕೋಟಿ ರೈತರಿಗೆ ಇದರ ಲಾಭ appeared first on News First Kannada.

Source: newsfirstlive.com

Source link