ಬೆಂಗಳೂರು: 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಬೇಕು ಅಂತ ತೀರ್ಮಾನ ಮಾಡಿದಾಗ ಸಾಕಷ್ಟು ವ್ಯಾಕ್ಸಿನ್ ಒದಗಿಸಿದ್ದೆವು. ಆದರೆ ಆಗ ಲಸಿಕೆ ಬಗ್ಗೆ ಕನ್ಫ್ಯೂಷನ್​​ನಿಂದಾಗಿ ಶೇ. 52 ರಷ್ಟು ಜನರು ಮಾತ್ರ ತೆಗೆದುಕೊಂಡರು. ಹೀಗಾಗಿ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೊಡಲು ತೀರ್ಮಾನ ಮಾಡಿದರು. ಎರಡನೇ ಕೊರೊನಾ ಅಲೆ ಜೋರಾದ ನಂತರ ಜನ ವ್ಯಾಕ್ಸಿನ್​​ಗೆ ಮುಗಿಬಿದ್ದರು. ಹೀಗಾಗಿ ವ್ಯಾಕ್ಸಿನ್ ಕೊರತೆ ಆಯಿತು ಅಂತ  ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

303.69 ಕೋಟಿ ರೂಪಾಯಿ ಹಣ ಕೇಂದ್ರದಿಂದ ಬಂದಿದೆ
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಲಸಿಕೆಯ ಪ್ರೊಡಕ್ಷನ್ ಹೆಚ್ಚಾಗಲಿದೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ತೊಂದರೆ ಆಗಿದೆ ನಿಜ. ಪ್ರಧಾನಮಂತ್ರಿ ಕಾರ್ಯಾಲಯ ಇದನ್ನು ಮ್ಯಾನೇಜ್ ಮಾಡ್ತಿದೆ, ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ ಎಂದರು. ಕೋರ್ಟ್ ಇಷ್ಟು ಲಸಿಕೆ ಕೊಟ್ಟೇ ಕೊಡಬೇಕು ಅಂತ ಹೇಳುತ್ತೆ, ಆದರೆ ಪ್ರೊಡಕ್ಷನ್ ಆಗಬೇಕಲ್ಲ. ಈ ತಿಂಗಳು ರಾಜ್ಯಕ್ಕೆ ಸುಮಾರು 10 ಲಕ್ಷ ಕೋವಿಶೀಲ್ಡ್ ಹಾಗೂ 2 ಲಕ್ಷ ಕೋವ್ಯಾಕ್ಸಿನ್ ನಮ್ಮ ರಾಜ್ಯಕ್ಕೆ ಬರಲಿದೆ. ನಿನ್ನೆವರೆಗೆ ಪಿಎಂ ಕೇರ್ಸ್​​ನಿಂದ 303.69 ಕೋಟಿ ರೂಪಾಯಿ ಹಣ ಕೇಂದ್ರದಿಂದ ಕೋವಿಡ್ ಕೇರ್​ಗೆ ಬಂದಿದೆ. ಕೋಲಾರ, ಯಾದಗಿರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೆ ಕೇಂದ್ರದ ಸಹಾಯ ಬಂದಿದೆ. ಉಳಿದ ಉಪಕರಣಗಳನ್ನ ಬಿಟ್ಟು ಕ್ಯಾಶ್ ಫ್ಲೋ ರಾಜ್ಯ ಸರ್ಕಾರಕ್ಕೆ 303 ಕೋಟಿ ಬಂದಿದೆ ಎಂದು ತಿಳಿಸಿದ್ರು.

ಗ್ಲೋಬಲ್ ಟೆಂಡರ್​ಗೆ ಮನವಿ ಮಾಡಿದೆಯೇ ವಿನಃ ಗ್ಲೋಬಲ್ ಟೆಂಡರ್ ಮಾಡಿಲ್ಲ
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇವೆ. ಸಣ್ಣಪುಟ್ಟ ಲ್ಯಾಪ್ಸ್​​ಗಳು ಆಗಿವೆ, ಗಮನಕ್ಕೆ ಬಂದ ಕೂಡಲೇ ರಾಜ್ಯಕ್ಕೆ ತಿಳಿಸಿದ್ದೇವೆ.  ಕರ್ನಾಟಕ ಗ್ಲೋಬಲ್ ಟೆಂಡರ್​ಗೆ ಮನವಿ ಮಾಡಿದೆಯೇ ವಿನಃ ಗ್ಲೋಬಲ್ ಟೆಂಡರ್ ಮಾಡಿಲ್ಲ. ಬೇರೆಯವರು ಪಾಲಿಟಿಕ್ಸ್ ಮಾಡ್ತಾರೆ ಅಂತ ನಾವು ಮಾಡಲ್ಲ ಎಂದು ಡಿವಿಎಸ್​ ಹೇಳಿದರು.

ಇನ್ನು, ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚು ಆಕ್ಸಿಜನ್ ಸಿಕ್ಕಿದೆ. ಆರಂಭದಲ್ಲಿ ಕರ್ನಾಟಕಕ್ಕೆ ಕೇವಲ 25 ಸಾವಿರ ರೆಮ್ಡೆಸಿವಿರ್ ಮೀಸಲಿತ್ತು, ಅದನ್ನು ಒಂದು ಲಕ್ಷದ ಇಪ್ಪತ್ತೆರಡು ಸಾವಿರಕ್ಕೆ ಏರಿಸಿದೆ. ಆಕ್ಟೀವ್ ಕೇಸಸ್ ಆಧಾರದ ಮೇಲೆ ಕೇಂದ್ರ ಅಲಾಟ್​ ಮಾಡ್ತಿದೆ ಎಂದರು.

ತಕ್ಷಣ 75 ಸಾವಿರ ಡೋಸ್ ಲಸಿಕೆ ರಾಜ್ಯಕ್ಕೆ ಬರಲಿದೆ
ದೇಶಾದ್ಯಂತ 17 ಕೋಟಿ ಇಪ್ಪತ್ತೆರಡು ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಆಕ್ಟೀವ್ ಕೇಸ್ ಇವೆ. ನಮ್ಮ ರಾಜ್ಯಕ್ಕೆ 1 ಕೋಟಿ 9 ಲಕ್ಷದ 28,270 ಡೋಸ್ ಸಪ್ಲೈ ಆಗಿದೆ
1 ಕೋಟಿ 8 ಲಕ್ಷದ 30 ಲಕ್ಷದ 123 ಡೋಸ್​ ಕೊಡಲಾಗಿದೆ. ರಾಜ್ಯದಲ್ಲಿ ಸ್ಟಾಕ್ ಇರುವ ವ್ಯಾಕ್ಸಿನ್ 98,147 ಡೋಸ್​. ತಕ್ಷಣ 75 ಸಾವಿರ ಡೋಸ್ ಬರಲಿದೆ ಎಂದು ಮಾಹಿತಿ ನೀಡಿದರು.

500 ಮೆಟ್ರಿಕ್ ಟನ್​ನ ಆಕ್ಸಿಜನ್ ಕಂಟೈನರ್ ಇವತ್ತು ರೀಚ್ ಆಗುತ್ತೆ
ಇದೇ ವೇಳೆ ಆಕ್ಸಿಜನ್ ಕೊರತೆ ವಿಚಾರವಾಗಿ ಮಾತನಾಡಿದ ಸದಾನಂದಗೌಡ, ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸಣ್ಣಪುಟ್ಟ ಘಟನೆ ನಡೆದಿದೆ. ಹೌದು ನಮ್ಮಿಂದ ತಪ್ಪಾಗಿದೆ. ರಾಜಕಾರಣದಲ್ಲಿ ಸಹ ಅಂತಃಕರಣ ಇದೆ ಎಂಬುದನ್ನ ತೋರಿಸಬೇಕಿದೆ. ಮೊದಲನೇ ಅಲೆಯ ವೇಳೆ ಆಕ್ಸಿಜನ್ ಕೊರತೆ ಆಗಿರಲಿಲ್ಲ. ಈ ಬಾರಿ ಪ್ರೊಡಕ್ಷನ್, ಸಪ್ಲೈ ಎಲ್ಲಾ ಮಾಡಿದ್ದೇವೆ. ಮೇ 11 ರಂದು 1015 ಮೆಟ್ರಿಕ್ ಟನ್ ಆಕ್ಸಿಜನ್ ಕೇಂದ್ರದಿಂದ ರಾಜ್ಯಕ್ಕೆ ಅಲಾಟ್ ಆಗಿದೆ. 1900 ಪಬ್ಲಿಕ್ ಹೆಲ್ತ್ ಫೆಸಿಲಿಟಿಯನ್ನ ಈಗಾಗಲೇ ಎಸ್ಟಾಬ್ಲಿಷ್ ಮಾಡಿದ್ದೇವೆ. ಐದು ನೂರು ಮೆಟ್ರಿಕ್ ಟನ್ನ ಆಕ್ಸಿಜನ್ ಕಂಟೈನರ್ ಇವತ್ತು ರೀಚ್ ಆಗುತ್ತೆ. ಎರಡು ಆಕ್ಸಿಜನ್ ಜನರೇಟರ್ ಯಾದಗಿರಿಗೆ ಬಂದಿದೆ, ಇನ್ನೊಂದು ಕೆಜಿಎಫ್ ಗೆ ಬಂದಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡಿದೆ. ಆಕ್ಸಿಜನ್, ವ್ಯಾಕ್ಸಿನ್ ಎಲ್ಲಾ ವ್ಯವಸ್ಥೆ ಮಾಡಿದೆ. ವ್ಯಾಕ್ಸಿನ್ ವಿಚಾರವಾಗಿ ದೊಡ್ಡ ವಿಚಾರ ಮುಂದೆ ಬಂದಿದೆ. ಆದರೆ 135 ಕೋಟಿ ಜನಸಂಖ್ಯೆಯ ದೇಶದಲ್ಲಿ ಇದು ಸವಾಲು ಎಂದರು.

ಕಾಂಗ್ರೆಸ್ ಪ್ರತಿಭಟನೆ ಮೂಲಕ ಜನರ ಆತ್ಮಸ್ಥೈರ್ಯ ಕುಂದಿಸುತ್ತಿದೆ
ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿದ ಡಿವಿಎಸ್ , ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದ ಕೊರೊನಾ ಹೋಗುತ್ತೆ ಅಂದರೆ ಅವರು ಪ್ರತಿಭಟನೆ ಮಾಡಲಿ.  ಆದರೆ ಇವರು ಜನರಿಂದ ದೂರ ಇರಲು ಪ್ರತಿಭಟನೆ ಮಾಡ್ತಿದ್ದಾರೆ. ಜನರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತಿಭಟನೆ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿಭಟನೆ ಮೂಲಕ ಜನರ ಆತ್ಮಸ್ಥೈರ್ಯ ಕುಂದಿಸುತ್ತಿದ್ದಾರೆ ಎಂದು ಹರಿಹಾಯ್ದರು.

39 ಲಕ್ಷಕ್ಕೂ ಹೆಚ್ಚು ರೆಮ್ಡೆಸಿವಿರ್ ಪ್ರತಿ ವಾರ ಸಪ್ಲೈ ಮಾಡ್ತಿದ್ದೇವೆ
ರೆಮ್ಡೆಸಿವಿರ್ ನ ಪೇಟೆಂಟ್ ಇದ್ದವರು ಯಾರಿಗೆ ಅನುಮತಿ ಕೊಡ್ತಾರೋ ಅವರು ಮಾತ್ರ ಉತ್ಪಾದನೆ ಮಾಡಬಹುದು. ಭಾರತದಲ್ಲಿ ಏಳು ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಮೊದಲನೇ ಅಲೆಯ ವೇಳೆ ರೆಮ್ಡೆಸಿವಿರ್ ಪ್ರೊಡಕ್ಷನ್ ಚೆನ್ನಾಗಿತ್ತು. ಆದರೆ ಮೊದಲನೇ ಅಲೆ ಕಡಿಮೆಯಾದ ನಂತರ ಉತ್ಪಾದನೆ ಕಡಿಮೆ ಆಯ್ತು. ಅಷ್ಟೇ ಅಲ್ಲದೇ ರಫ್ತು ಮಾಡಲಾರಂಭಿಸಿದರು. ಮೇ 7ಕ್ಕೆ 39 ಲಕ್ಷಕ್ಕೂ ಹೆಚ್ಚು ರೆಮ್ಡೆಸಿವಿರ್ ಪ್ರತಿ ವಾರ ಸಪ್ಲೈ ಮಾಡ್ತಿದ್ದೇವೆ. ಆರಂಭದಲ್ಲಿ ಡಿಮ್ಯಾಂಡ್ ಹೆಚ್ಚಿತ್ತು, ಆದರೆ ಈಗ ಸಿಗ್ತಿದೆ, ಹಚ್ಚು ಸಮಸ್ಯೆ ಇಲ್ಲ. ಕೆಲವುಉತ್ಪಾದಕರಿಂದ  ಸಪ್ಲೈ ತೊಂದರೆ ಆಗಿತ್ತು, ಈಗ ಅದೂ ಸರಿ ಮಾಡಿದ್ದೇವೆ. ರೆಮ್ಡಿಸಿವಿರ್ ಪ್ರಾಬ್ಲಂ ಇಲ್ಲ. ಡ್ರಗ್ ಕಂಟ್ರೋಲರ್​ಗಳಿಗೆ ಹೇಳಿ ಬ್ಲಾಕ್ ಮಾರ್ಕೆಟ್ ಮೇಲೆ ದಾಳಿ ಮಾಡಲು ಹೇಳಿದ್ದೇವೆ ಎಂದು ತಿಳಿಸಿದ್ರು.

ಇನ್ನು Tocilizumub ಅತ್ಯಂತ ಕಾಸ್ಟ್ಲಿ ಹಾಗೂ ಪವರ್ ಫುಲ್ ಇಂಜೆಕ್ಷನ್. ಇದರ ಒರಿಜನಲ್ ಕಂಪನಿ ಐವತ್ತು ಸಾವಿರ ಡೊನೇಟ್ ಮಾಡಿತ್ತು. ಇದು ಒಂದಕ್ಕ ಮೂವತ್ನಾಲ್ಕು ಸಾವಿರ ರೂಪಾಯಿ ಬೆಲೆ ಇದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚು ಸಪ್ಲೈ ಆಗ್ತಿದೆ. ಬ್ಲಾಕ್ ಫಂಗಸ್ ಇನ್​ಫೆಕ್ಷನ್​ಗಾಗಿ AMPHOTERICIN ಔಷಧಕ್ಕೆ ಬಹಳ ಬೇಡಿಕೆ ಇದೆ. ಇದನ್ನ ಕೂಡ ಸಾಕಷ್ಟು ವ್ಯವಸ್ಥೆ ಮಾಡಿದ್ದೇವೆ. 1050 ಅಯಾನ್ಸ್ ಈಗ ನಮ್ಮ ಬಳಿ‌ ಇದೆ. ಮುಂದೆ ಮತ್ತಷ್ಟು ಸ್ಟಾಕ್ ಮಾಡ್ತೇವೆ ಎಂದು ಹೇಳಿದರು.

Ivermectin ಸ್ಟಾಕ್ ಮಾಡ್ತಿದ್ದೇವೆ
ಕಡಿಮೆ ಸಿಂಪ್ಟಂಸ್ ಇರೋರಿಗೆ ಕೊಡಲಾಗುವ Ivermectinಗೆ ಕೂಡ ಸಾಕಷ್ಟು ಡಿಮ್ಯಾಂಡ್ ಇದೆ. ಇದು ಪ್ರಿವೆಂಟೀವ್ ಮೆಡಿಸಿನ್. ಗೋವಾದಲ್ಲಿ ಎಲ್ಲರಿಗೂ ಕೊಡಬೇಕು ಎಂಬುದಿದೆ. ಹೀಗಾಗಿ ಇದರ ಸ್ಟಾಕ್ ಮಾಡ್ತಿದ್ದೇವೆ. ಬೆಲೆ ಒಂದಷ್ಟು ಏರಿಳಿತ ಆಗ್ತಿದೆ, ಹೀಗಾಗಿ ಪ್ರಧಾನಿ ಈ ವಿಚಾರದಲ್ಲಿ ಖಡಕ್ ನಿರ್ದೇಶನ ನೀಡಿದ್ದಾರೆ. ಡ್ರಗ್ ಕಂಟ್ರೋಲರ್ ಇದರ ಗಮನ ವಹಿಸ್ತಿದ್ದಾರೆ. ಪ್ರತಿ ದಿನ ಕೇಂದ್ರ ಆರೋಗ್ಯ ಇಲಾಖೆ ಇವೆಲ್ಲವನ್ನೂ ಮಾನಿಟರ್ ಮಾಡ್ತಿದೆ. ನಮ್ಮ ಡಿ.ಆರ್.ಡಿ.ಓ ಹೊಸ ಔಷಧ ಸಂಶೋಧನೆ ಮಾಡಿದೆ. ರಾಜ್ಯದ ಆಕ್ಸಿಜನ್ ರಾಜ್ಯಕ್ಕೆ ಕೊಡಬೇಕೆಂಬ ವಿಚಾರವಾಗಿ ನಿನ್ನೆ ಪಿಯೂಶ್ ಗೋಯಲ್ ಜೊತೆ ಸಭೆ ನಡೆದಿದೆ ಎಂದು ಸದಾನಂದಗೌಡ ಹೇಳಿದರು.

 

The post ಪಿಎಂ ಕೇರ್ಸ್​​ನಿಂದ ರಾಜ್ಯಕ್ಕೆ ₹303 ಕೋಟಿ ಬಂದಿದೆ – ಡಿವಿಎಸ್​​ appeared first on News First Kannada.

Source: newsfirstlive.com

Source link