ನವದೆಹಲಿ: ಪಿಎಂ ಕೇರ್ಸ್​ ನಿಧಿಯ ಹಣದಿಂದ 1 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್​​ಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ಅನುಮತಿ ನೀಡಿದ್ದಾರೆ.

ಅಲ್ಲದೇ ಪಿಎಂ ಕೇರ್ಸ್​ ಹಣದಿಂದ ಈ ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ಸಾಧ್ಯವಾದಷ್ಟು ಶೀಘ್ರವಾಗಿ ಖರೀದಿಸಬೇಕು ಮತ್ತು ಅವುಗಳನ್ನು ಹೆಚ್ಚು ಕೊರೊನಾ ಕೇಸ್​​ಗಳು ಕಂಡುಬರುತ್ತಿರುವ ರಾಜ್ಯಗಳಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ಆದೇಶಿಸಿದ್ದಾರೆ. ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳಿಗೆ ಈ ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ಲಭ್ಯವಾಗುವ ಸಾಧ್ಯತೆಗಳಿವೆ.

The post ಪಿಎಂ ಕೇರ್ಸ್​ ನಿಧಿಯಿಂದ 1 ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್ಸ್​​ ಖರೀದಿಸಲು ಮೋದಿ ಆದೇಶ appeared first on News First Kannada.

Source: newsfirstlive.com

Source link