ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ (ಪಿಎನ್​ಬಿ) ಬಹುಕೋಟಿ ಲೇವಾದೇವಿ ಪ್ರಕರಣದ ಪ್ರಮುಖ ಆರೋಪಿ ಮೇಹುಲ್​ ಚೋಕ್ಸಿ ಡೊಮಿನಿಕಾ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿದ್ದಾರೆ. ಮೇಹುಲ್​ ಚೋಕ್ಸಿ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಡೊಮಿನಿಕಾ ಕೋರ್ಟ್​ ಜುಲೈ 6ನೇ ತಾರೀಕಿನಂದು ನಡೆಸುವ ಸಾಧ್ಯತೆ ಇದೆ.

ಈ ಹಿಂದೆ ಉದ್ಯಮಿ ಮೆಹುಲ್ ಚೋಕ್ಸಿಗೆ ಎರಡು ಬಾರಿ ಜಾಮೀನು ನೀಡುವಂತೆ ಕೋರಿದ್ದರು.. ಡೊಮಿನಿಕಾ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ನಿಮ್ಮ ಸೋದರನೊಂದಿಗೆ ಹೋಟೆಲ್​ವೊಂದರಲ್ಲಿ ಉಳಿಯಲು ಹೇಗೆ ನಿರ್ಧಾರ ತೆಗೆದುಕೊಂಡಿರಿ ಎಂದು ಕೋರ್ಟ್​ ಚೋಕ್ಸಿಗೆ ಪ್ರಶ್ನಿಸಿತ್ತು. ಇನ್ನೂ ವಿಚಾರಣೆ ಆರಂಭವಾಗಿಲ್ಲ. ಅಲ್ಲಿಯತನಕ ಎಲ್ಲಿಗೂ ಹೋಗುವಂತಿಲ್ಲ ಎಂದು ತರಾಟೆಗೆ ತೆಗದುಕೊಂಡಿತ್ತು.

ಡೊಮಿನಿಕಾ ಹೈಕೋರ್ಟ್‌ನ ನ್ಯಾಯಾಧೀಶ ವಿನಾಂಟೆ ಆಡ್ರಿಯನ್-ರಾಬರ್ಟ್ಸ್ ಅವರು ಹೀಗೆ ಆದೇಶ ಹೊರಡಿಸಿದ್ದರು. ನಿಮಗೆ ಜಾಮೀನು ನೀಡಲು ಯಾವುದಾದರೂ ಒಂದು ಬಲವಾದ ಕಾರಣ ಕೊಡಿ. ನೀವು ಫ್ಲೈಯಿಂಗ್ ಭಯದ ಬಗ್ಗೆ ಹೇಳಿರುವುದು ಗಮನಾರ್ಹವಾದರೂ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಅಳಿಯ ನೀರವ್​ ಮೋದಿ ಜೊತೆ ಸೇರಿ ಮೇಹುಲ್​ ಚೋಕ್ಸಿ ಪಂಜಾಬ್​​ ನ್ಯಾಷನಲ್​​​ ಬ್ಯಾಂಕ್​​ಗೆ 13,500 ಕೋಟಿ ರೂ ವಂಚಿಸಿದ್ದ. ಬಳಿಕ 2018ರ ಜನವರಿಯಲ್ಲಿ ಮೇಹುಲ್​ ಚೋಕ್ಸಿ ದೇಶದಿಂದ ಪರಾರಿಯಾಗಿದ್ದ. ಅದರ ಬೆನ್ನಲ್ಲೇ ಸಿಬಿಐ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಲೇವಾದೇವಿ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿತ್ತು. ದೇಶ ತೊರೆದ ಚೋಕ್ಸಿ ಆಂಟಿಗುವಾ ದೇಶದ ಸದಸ್ಯತ್ವ ಪಡೆದಿದ್ದರು.

The post ಪಿಎನ್​​​ಬಿ ಹಗರಣ: ಡೊಮಿನಿಕಾ ಹೈಕೋರ್ಟ್‌ನಲ್ಲಿ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಚೋಕ್ಸಿ appeared first on News First Kannada.

Source: newsfirstlive.com

Source link